ಟೇಕ್ವಾಂಡೋದಲ್ಲಿ ಅದಿತಿಗೆ ಕಂಚು

17 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಜಿಲ್ಲಾ ಟೇಕ್ವಾಂಡೊ ಸಂಸ್ಥೆ ಕ್ರೀಡಾಪಟುಗಳು ಗೋವಾದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 37ನೇ ನ್ಯಾಷನಲ್ ಗೇಮ್ಸ್ ಹಾಗೂ ಅಂತರ್ ವಿಶ್ವವಿದ್ಯಾಲಯದ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ಆನಂದ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಟೇಕ್ವಾಂಡೊ ಸಂಸ್ಥೆ ಹಾಗೂ ಕೆಸಿಡಿ ಕಾಲೇಜಿನ ವಿದ್ಯಾರ್ಥಿನಿ ಅದಿತಿ ಪರಪ್ಪ ಕ್ಷಾತ್ರತೇಜ್ ಅವರು ನ್ಯಾಷನಲ್ ಗೇಮ್ಸ್‌ನಲ್ಲಿ ಭಾಗವಹಿಸಿ ಮಹಿಳೆಯ ಟೇಕ್ವಾಂಡೊ ಕ್ರೀಡೆಯ 53 ಕೆಜಿ ವಿಭಾಗದಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿ ಕಂಚಿನ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಇದೇ ಕ್ರೀಡಾಕೂಟದಲ್ಲಿ ಪುರುಷರ ವಿಭಾದಲ್ಲಿ ಭಾಗವಹಿಸಿದ್ದ ದಿತಿಷ್ ದಿನಕರ ಶೆಟ್ಟಿ ಉತ್ತಮ ಸ್ಪರ್ಧೆ ನೀಡಿ ಮಾದರಿಯಾಗಿದ್ದಾರೆ ಎಂದರು.
ರಾಜಸ್ಥಾನದ ಜೆಜೆಟಿ ವಿವಿಯಲ್ಲಿ ಏರ್ಪಡಿಸಿದ್ದ ಉತ್ತರ ಪಶ್ಚಿಮ ಅಂತರ್ ವಿವಿಗಳ ಟೇಕ್ವಾಂಡೋ ಕ್ರೀಡಾಕೂಟದಲ್ಲಿ ಕರ್ನಾಟಕ ಮಹಾವಿದ್ಯಾಲಯದಿಂದ ಸ್ಪರ್ಧಿಸಿದ್ದ ಎರಡು ತಂಡಗಳು ಕಂಚು ಮತ್ತು ಬೆಳ್ಳೆ ಪದಕ ಪಡೆದಿವೆ. ಅಲ್ಲದೆ ಕ್ರೀಡಾಪಟುಗಳಾದ ಸ್ಫೂರ್ತಿ ನಿಕ್ಕಂ, ಧಾಮಿನಿ ಬಣ್ಣಿಕೊಪ್ಪ, ಸಂಜನಾ ಬಳ್ಳಾರಿ, ಶ್ವೇತಾ ನಾಯಕ, ಭವಾನಿ, ಕೃಪಾ ಸುಂಕದ ಪ್ರಿಕ್ವಾರ್ಟರ್ ಫೈನಲ್‌ವರೆಗೂ ತಲುಪಿ ಅಖಿಲ ಭಾರತ ಅಂತರ್ ವಿವಿಗಳ ಟೇಕ್ವಾಂಡೊ ಕ್ರೀಡೆಗೆ ಆಯ್ಕೆಯಾಗಿದ್ದಾರೆ ಎಂದರು.
ಬಿ.ಎಸ್. ತಾಳಿಕೋಟಿ, ಆನಂದ ಕಿಟದಾಳ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net