ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದ ಭಗ್ನಪ್ರೇಮಿ ಬದುಕುಳಿಯಲಿಲ್ಲ!

IMG_20250710_223148.jpg
Published on

ಚಿಕ್ಕಬಳ್ಳಾಪುರ: ಸಂಬಂಧಿ ಯುವತಿ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಮಂಚನಬಲೆಯಲ್ಲಿ ಮೈ ಮೇಲೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿಕೊಂಡಿದ್ದ ಭಗ್ನ ಪ್ರೇಮಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಶಿಡ್ಲಘಟ್ಟ ತಾಲೂಕಿನ ಬಶೆಟ್ಟಿಹಳ್ಳಿಯ ಆನಂದ್ ಕುಮಾರ್ (೨೯) ಆರೋಪಿ. ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದವನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೇ.೮೦ ರಷ್ಟು ಸುಟ್ಟು ಗಾಯಗಳಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
*ಪ್ರಕರಣದ ಹಿನ್ನೆಲೆ
ತಂದೆ ತಾಯಿ ಇಲ್ಲದ ಆನಂದ್ ಕುಮಾರ್ ಅಜ್ಜಿ ಮನೆಯಲ್ಲಿ ವಾಸವಾಗಿದ್ದ. ಪದವಿ ಶಿಕ್ಷಣ ಪಡೆದು ಉದ್ಯೋಗ ಹುಡುಕಾಟದಲ್ಲಿದ್ದ. ಇದರ ನಡುವೆ ಅತ್ತೆಯ ಮಗಳನ್ನು ಪ್ರೀತಿಸಲು ಹಲವು ತಿಂಗಳುಗಳಿಂದ ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಆಕೆಯು ಮಂಚನಬಲೆಯಲ್ಲಿನ ನೆಂಟರ ಮನೆಯಲ್ಲಿ ಉಳಿದುಕೊಂಡಿದ್ದಳು. ಈ ಬಗ್ಗೆ ಮಾಹಿತಿ ತಿಳಿದುಕೊಂಡ ಬಂದ ಆನಂದ್‌ ಕುಮಾರ್‌ ಇಬ್ಬರು ಮದುವೆಯಾಗದಿದ್ದಲ್ಲಿ ಸತ್ತು ಹೋಗೋಣ ಎಂದು ಕೂಗುತ್ತ ಮನೆಯಲ್ಲಿನ ಶೌಚಗೃಹ ಸ್ವಚ್ಛತೆಯ ಆ್ಯಸಿಡ್ ಕುಡಿಸಲು ಯತ್ನಿಸಿದ್ದಾನೆ. ಇದರಿಂದ ತಕ್ಷಣ ಎಚ್ಚೆತ್ತುಕೊಂಡು ಯುವತಿ ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಚೀರಾಡಿದ್ದು ಇದಕ್ಕೆ ಭಯಭೀತನಾಗಿ ಹೊರಗೆ ಬಂದು ಆ ವೇಳೆಗಾಗಲೇ ತಂದಿದ್ದ ಪೆಟ್ರೋಲ್‌ ಮೈ ಮೇಲೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ತಕ್ಷಣ ಸ್ಥಳೀಯರು ಇಬ್ಬರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.


*ಹಲವು ಬಾರಿ ಪ್ರೀತಿ ಪ್ರೇಮ ನಿವೇದನೆ ಮಾಡಿ, ಮದುವೆಯಾಗಲು ಪೀಡಿಸುತ್ತಿದ್ದ. ಒಪ್ಪಿಗೆ ಸೂಚಿಸದಿದ್ದರೂ ಸಹ ಬಿಡಲಿಲ್ಲ. ಮಂಚನಬಲೆಗೆ ಬಂದು ಆ್ಯಸಿಡ್ ಕುಡಿಸಿ ಸಾಯಿಸಲು ಯತ್ನಿಸಿದ. ಆತನಿಂದ ತಪ್ಪಿಸಿಕೊಂಡು ಮನೆಯ ಕೊಠಡಿಯೊಳಗೆ ಹೋಗಿ ಬಚ್ಚಿಟ್ಟುಕೊಂಡೆ, ಕುಟುಂಬಸ್ಥರು ಆಸ್ಪತ್ರೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಸಂತ್ರಸ್ಥೆ, ಮಂಚನಬಲೆ


*ನನಗೆ ಆ ಹುಡುಗಿ, ಸಂಬಂಧಿಕರು ವಂಚಿಸಿದ್ದು ಮದುವೆಯಾಗಲು ಬಿಟ್ಟಿಲ್ಲ. ಇದರಿಂದ ಬೇರೆ ವಿಧಿಯಿಲ್ಲದೇ ಸಾಯಲು ಮೈ ಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡೆ. ಈಗ ಅವರಿಂದ ಸಾಯೋ ಪರಿಸ್ಥಿತಿ ಬಂದಿದೆ.


ಆನಂದ್‌ ಕುಮಾರ್, ಮೃತ (ಸಾಯುವ ಮೊದಲು ನೀಡಿದ ಹೇಳಿಕೆ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net