

ಉಡುಪಿ: ಬ್ರೀಟಿಷ್ ಆಡಳಿತದಲ್ಲಿ ಸಬ್ ಜೈಲ್ ಆಗಿದ್ದ ಹಳೆ ತಾಲೂಕು ಕಚೇರಿ ಕಟ್ಟಡ ತೆರವು ಕಾರ್ಯಾಚರಣೆ ಪ್ರಾರಂಭಗೊಂಡಿದ್ದು, ಈ ಜಾಗದಲ್ಲಿ ನಗರಸಭೆಯ ಹೊಸ ಕಟ್ಟಡ ತಲೆ ಎತ್ತಲಿದೆ.
1906ರಲ್ಲಿ ನಿರ್ಮಾ-ಣ-ವಾಗಿದ್ದ ಈ ಕಟ್ಟ-ಡ-ವನ್ನು ಪಾರಂಪ-ರಿಕ ಕಟ್ಟಡ ಮಾನ್ಯತೆ-ಯೊಂದಿಗೆ ಉಳಿ-ಸಲು ಸಾಮಾಜಿಕ ಕಾರ್ಯಕರ್ತರು ಪ್ರಯತ್ನಿಸಿದ್ದರು. ಅದಾಗಲೇ ನಗರಸಭೆ ಕಟ್ಟಡಕ್ಕೆ ಈ ಜಾಗ ಮೀಸಲಾಗಿದ್ದ ಕಾರಣ ಕಟ್ಟ-ಡ-ವನ್ನು ನೆಲ-ಸ-ಮಗೊ-ಳಿ-ಸುವಂತೆ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. 3&4 ದಿನಗಳಿಂದ ಹಳೆ ಕಟ್ಟಡದ ಹೆಂಚು-ಗ-ಳ-ನ್ನು ತೆಗೆ-ಯುವ ಕಾರ್ಯ ಆರಂಭ-ಗೊಂಡಿ-ದೆ.
ಉಡುಪಿ ನಗರಸಭೆಗೊಂದು ಹೊಸ ಕಟ್ಟಡ ನಿಮಾರ್ಣಕ್ಕಾಗಿ ಹಳೆ ತಾಲೂಕು ಕಚೇರಿ ಕಟ್ಟಡದ ಜಾಗವನ್ನು ( 96 ಸೆಂಟ್ಸ್) ರಾಜ್ಯ ಸರ್ಕಾರ ನಗರಸಭೆಗೆ ಹಸ್ತಾಂತರಿಸಿ ಎರಡು ವರ್ಷ ಸಂದಿದೆ. 2023 ಮೇನಲ್ಲಿ ಹಳೆ ಕಟ್ಟಡ ತೆರವು, ನೆಲಸಮಕ್ಕೆ ಮಂಗಳೂರಿನ ಖಾಸಗಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿತ್ತು. ಆದರೆ ಉಡುಪಿಯ ಏಕೈಕ ಪಾರಂಪರಿಕ ಕಟ್ಟಡ ನೆಲಸಮಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ಹಿನ್ನೆಲೆಯಲ್ಲಿ ಜು. 3ರಂದು ಹಳೆ ತಾಲೂಕು ಕಚೇರಿ ಕಟ್ಟಡ ಕೆಡವಲು ನೀಡಿದ್ದ ಕಾರ್ಯಾದೇಶವನ್ನು ನಗರಸಭೆ ತಾತ್ಕಾಲಿಕವಾಗಿ ತಡೆ ಹಿಡಿದಿತ್ತು.
ನಗ-ರ-ಸಭೆ ಹೊಸ ಕಟ್ಟ-ಡಕ್ಕೆ ಬೇಡಿ-ಕೆ
ಕವಿ ಮುದ್ದಣ ಮಾರ್ಗ-ದ-ಲ್ಲಿ-ರುವ ಪ್ರಸ್ತುತ ನಗ-ರ ಸಭಾ ಕಚೇರಿ ಇಕ್ಕ-ಟ್ಟಿ-ನಿಂದ ಕೂಡಿದ್ದು, ಹೊರಗೂ ವಾಹನ ಪಾರ್ಕಿಂಗ್ ಅವ-ಕಾ-ಶ-ವಿಲ್ಲ. ಮೀಟಿಂಗ್ ಹಾಲ್, ಪಾರ್ಕಿಂಗ್, ವಿವಿಧ ಕಛೇರಿಗಳಿಗೆ ಸ್ಥಳಾವಕಾಶದ ಕೊರತೆ. ಜನರಿಗೆ ಸಮಸ್ಯೆ ತೀವ್ರವಾಗುತ್ತಿದ್ದು, ಹೊಸ ಕಟ್ಟಡ ನಿಮಾರ್ಣಕ್ಕೆ ಸದಸ್ಯರಿಂದ ಹೆಚ್ಚಿನ ಒತ್ತಡ ಬಂದ ಕಾರಣ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಹೊಸ ಆಡಳಿತ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ವೇಗ ನೀಡಿದೆ. ಹಳೆ ತಾಲೂಕು ಕಚೇರಿ ಕಟ್ಟಡದಲ್ಲಿ ಜಾಗದಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಒಂದು ಲಕ್ಷ ಚದರ ಅಡಿ ವಿಸ್ತೀರ್ಣದ (ತಳ, ನೆಲ ಸಹಿತ ಮೂರು ಮಹಡಿ) ಕಟ್ಟಡ ನಿಮಾರ್ಣಕ್ಕೆ ನೀಲ ನಕಾಶೆ ತಯಾರಿಸಲಾಗಿದ್ದು, ಸರ್ಕಾರದ ಅನುಮೋದನೆ ಪಡೆಯಲಾಗಿದೆ.
ಶತಮಾನಗಳ ಪಾರಂಪರಿಕ ಕಟ್ಟಡ
ಉಡುಪಿ ನಗ-ರ-ದ-ಲ್ಲಿ- ಸ್ವಾತಂತ್ರ ಹೋರಾ-ಟಕ್ಕೆ ಸಂಬಂಧಿಸಿ ಕುರುಹುಗಳಲ್ಲಿ ಈ ಕಟ್ಟಡವೂ ಒಂದಾಗಿದೆ. ಸಣ್ಣ ಕೆಂಪು ಇಟ್ಟಿ-ಗೆ-ಗ-ಳನ್ನು ಬಳಸಿ ಮದ್ರಾಸ್ ರೂಫಿಂಗ್ ಮಾದ-ರಿ-ಯಲ್ಲಿ ನಿರ್ಮಿ-ಸಿದ ಕಟ್ಟಡದಲ್ಲಿ ಕೋರ್ಟ್ ಕಲಾ-ಪ-ಗಳು ನಡೆ-ಯು-ತ್ತಿ-ದ್ದವು. ಇಲ್ಲೇ ಜೈಲು ನಿರ್ಮಿಸಲಾಗಿತ್ತು. ಸ್ವಾತಂತ್ರ ಹೋರಾಟ-ದಲ್ಲಿ ಭಾಗಿ-ಯಾದ ಹಲ-ವರು ಇಲ್ಲೇ ಜೈಲುವಾಸ ಅನು-ಭ-ವಿ-ಸಿ-ದ್ದ-ರು. ಈ ಕಟ್ಟ-ಡದ ಮೇಲಂತ-ಸ್ತಿ-ನಲ್ಲಿ 12 ಮತ್ತು ಕೆಳ ಅಂತ-ಸ್ತಿ-ನಲ್ಲಿ 12 ಸೆಲ್-ಗ-ಳಿವೆ. ಉಡು-ಪಿ-ಯಲ್ಲಿ ಹೊಸ ಜೈಲು ನಿರ್ಮಾ-ಣ-ವಾ-ಗು-ವ-ವ-ರೆಗೂ ಇದೇ ಜೈಲಿ-ನಲ್ಲಿ ಕೈದಿ-ಗ-ಳನ್ನು ಇಡ-ಲಾ-ಗು-ತ್ತಿತ್ತು. ನಂತರ ತಾಲೂಕು ಕಚೇರಿ ಕಾರ್ಯನಿರ್ವಹಿಸುತ್ತಿತ್ತು. 10 ವರ್ಷ-ದ ಹಿಂದೆ ಮಿನಿ ವಿಧಾನ ಸೌಧಕ್ಕೆ ತಾಲೂಕು ಕಚೇರಿ ಸ್ಥಳಾಂತರವಾದ ಬಳಿಕ ಈ ಕಟ್ಟಡ ಪಾಳು-ಬಿ-ದ್ದಿತ್ತು.