

ಯಲಹಂಕ: ಅತ್ಯಾಧುನಿಕ ಸೌಲಭ್ಯಗಳು, ವ್ಯವಸ್ಥಿತ ಕಾರ್ಯನಿರ್ವಹಣೆಯ ಮೂಲಕ ಪ್ರಶಂಸೆಗೆ ಪಾತ್ರವಾಗಿರುವ ರಾಜಾನುಕುಂಟೆ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯಕ್ಕೆ ಸೋಮವಾರ ಬ್ರಿಟಿಷ್ ಕೌನ್ಸಿಲ್ ನಿಯೋಗ ಭೇಟಿ ನೀಡಿದೆ.
ಡೆಪ್ಯುಟಿ ಹೈಕಮಿಷನರ್(ಕರ್ನಾಟಕ, ಕೇರಳ) ಚಂದ್ರಶೇಖರ್ ಅಯ್ಯರ್, ಡೆಪ್ಯುಟಿ ಹೆಡ್ ಆ್ ಮಿಷನ್ ಬ್ರಿಟಿಷ್ ಜೇಮ್ಸ್ ಗಾಡ್ ಬೇರ್, ಕಂಟ್ರಿ ಡೈರೆಕ್ಟರ್ ಇಂಡಿಯಾ ಬ್ರಿಟಿಷ್ ಕೌನ್ಸಿಲ್ ಅಲಿಸನ್ ಬ್ಯಾರೆಟ್, ಬ್ರಿಟಿಷ್ ಕೌನ್ಸಿಲ್ನ ದಕ್ಷಿಣ ಭಾರತದ ಡೈರೆಕ್ಟರ್ ಜನಕಾ ಪುಷ್ಪನಾಥನ್ ಇತರರಿದ್ದ ನಿಯೋಗ ಗ್ರಂಥಾಲಯದಲ್ಲಿನ ಅತ್ಯಾಧುನಿಕ ಸೌಲಭ್ಯಗಳು, ಗ್ರಂಥಾಲಯದ ವ್ಯವಸ್ಥಿತ ನಿರ್ವಹಣೆ ಹಾಗೂ ಕಾರ್ಯಪ್ರಗತಿಯನ್ನು ಪರಿಶೀಲಿಸಿದರು.
ಬಳಿಕ ಅರಕೆರೆಯ ಸ್ವಚ್ಛ ಸಂಕೀರ್ಣ ಟಕಕ್ಕೆ ಭೇಟಿ ನೀಡಿ, ಅಲ್ಲಿನ ಕಸ ವಿಂಗಡಣೆಯ ಮಾದರಿ, ಔಷದೀಯ ಸಸ್ಯಗಳಿರುವ ಉದ್ಯಾನವನ, ಕಸದಿಂದ ಉತ್ಪಾದಿಸುವ ಸಾವಯವ ಗೊಬ್ಬರ ತಯಾರಿಕಾ ಟಕವನ್ನು ಪರಿಶೀಲಿಸಿದರು.
ಈ ವೇಳೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್, ಬೆಂ.ನಗರ ಜಿ.ಪಂ. ಸಿಇಒ ಲತಾಕುಮಾರಿ, ಉಪ ಕಾರ್ಯದರ್ಶಿ ಅನಿತಾ, ಯಲಹಂಕ ತಾ.ಪಂ. ಇಓ ಮಧು, ಸಹಾಯಕ ನಿರ್ದೇಶಕ ಅಮರಯ್ಯ, ರಾಜಾನುಕುಂಟೆ ಗ್ರಾ.ಪಂ.ಅಧ್ಯಕ್ಷೆ ಚನ್ನಮ್ಮ, ಉಪಾಧ್ಯಕ್ಷ ವೆಂಕಟೇಶ್, ಪಿಡಿಓ ನಾಗರಾಜ್ ಇತರರಿದ್ದರು.