

ಬೆಂಗಳೂರು: (King Charles Visit Bengaluru ) ಇಂಗ್ಲೆಂಡಿನ ರಾಜ ಕಿಂಗ್ ಚಾರ್ಲ್ಸ್ 3 ದಂಪತಿ ಪ್ರಕೃತಿ ಚಿಕಿತ್ಸೆ ಹಿನ್ನೆಲೆ ಬೆಂಗಳೂರಿಗೆ ಮೊದಲ ಭಾರಿಗೆ ರಹಸ್ಯವಾಗಿ ಭೇಟಿ ನೀಡಿದ್ದಾರೆ.
ಅಕ್ಟೋಬರ್ 27 ರಂದು ಬೆಂಗಳೂರಿಗೆ ಆಗಮಿಸಿದ್ದು, ಪ್ರಕೃತಿ ಚಿಕಿತ್ಸೆಗೆ ಇಂದು ರಾತ್ರಿಯವರೆಗೆ ವೈಟ್ಫೀಲ್ಡ್ನಲ್ಲಿರುವ ಸೌಖ್ಯ ಇಂಟರ್ನ್ಯಾಷನಲ್ ಹೋಲಿಸ್ಟಿಕ್ ಹೆಲ್ತ್ ಸೆಂಟರ್ನಲ್ಲಿ ಇರಲಿದ್ದಾರೆ.
ಯೋಗ, ಧ್ಯಾನ ಮೂಲಕ ಕಿಂಗ್ ಚಾರ್ಲ್ಸ್ 3 ದಂಪತಿ ದಿನಚರಿ ಆರಂಭಿಸಿದ್ದಾರೆ. ನಂತರ ಉಪಹಾರ ಮತ್ತು ಊಟದ ಮಾಡುತ್ತಾರೆ. ಸ್ವಲ್ಪ ವಿರಾಮ ನಂತರ, ಎರಡನೇ ಸುತ್ತಿನ ಚಿಕಿತ್ಸೆಗಳು ಶುರುವಾಗುತ್ತವೆ.
ರಾತ್ರಿ 9 ಗಂಟೆಗೆ ಊಟ ಮತ್ತು ಧ್ಯಾನದೊಂದಿಗೆ ಮುಕ್ತಾಯವಾಗುತ್ತದೆ. ನಂತರ ಕ್ಯಾಂಪಸ್ ಸುತ್ತಲೂ ಸುದೀರ್ಘ ನಡಿಗೆ, ಸಾವಯವ ಕೃಷಿ ಮತ್ತು ದನದ ಕೊಟ್ಟಿಗೆಗೆ ಭೇಟಿ ನೀಡುತ್ತಾರೆ. ರಾಜರ ರಹಸ್ಯ ಭೇಟಿಯಿಂದಾಗಿ ಸೌಖ್ಯ ಹೆಲ್ತ್ ಸೆಂಟರ್ ಸುತ್ತ ಹೆಚ್ಚಿನ ಭದ್ರತೆಯನ್ನು ಮಾಡಲಾಗಿದೆ.
ಈ ಹಿಂದೆಯು ಒಂದೆರಡು ಬಾರಿ ಆಯುರ್ವೇದ ಚಿಕಿತ್ಸೆಯನ್ನು ಪಡೆದುಕೊಂಡು ಪ್ರತಿದಿನ ಯೋಗ ಮಾಡುತ್ತಿದ್ದರು ಎನ್ನಲಾಗಿದೆ. ಪುನರ್ಚೈತನ್ಯ, ನಿರ್ಜಲೀಕರಣ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆಗಳನ್ನು ಪಡೆದಿದ್ದಾರೆ.