ಲೈಸೆನ್ಸ್ ನೀಡುವಾಗ ಆಡಳಿತ ಮಂಡಳಿ ಗಮನಕ್ಕೆ ತನ್ನಿ

21spt1
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಜೆಟ್ ಪೂರ್ವ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷರು ಮತ್ತು ಸದಸ್ಯರು ಚರ್ಚಿಸಿದರು. ಜಯಂತಿ, ಮೋಹಿನಿ, ಮಹೇಶ್, ವೆಂಕಟೇಶ್, ಶೀಲಾ ಇದ್ದರು.
Published on

ಸೋಮವಾರಪೇಟೆ: ಪಟ್ಟಣದಲ್ಲಿ ವಂಚಕರ ಜಾಲಕ್ಕೆ ಆನೇಕ ಮುಗ್ದರು ಪದೇ-ಪದೆ ಮೋಸ ಹೋಗುತ್ತಿದ್ದಾರೆ. ಪಂಚಾಯಿತಿ ಅಧಿಕಾರಿಗಳು ಲೈಸೆನ್ಸ್ ನೀಡುವಾಗ ಆಡಳಿತ ಮಂಡಳಿ ಗಮನಕ್ಕೆ ತರಬೇಕು ಎಂದು ಸದಸ್ಯೆ ಶೀಲಾ ಡಿಸೋಜ ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಬಜೆಟ್ ಪೂರ್ವ ಸಂಘ-ಸಂಸ್ಥೆಗಳ ಸಲಹೆ ಪಡೆಯುವ ಸಭೆಯಲ್ಲಿ ಮಾತನಾಡಿದರು.

ಸಂಘ-ಸಂಸ್ಥೆಗಳ ಪ್ರಮುಖರು, ಮಹಿ ಟ್ರೇಡರ್ಸ್‌ ಹೆಸರಿನಲ್ಲಿ ಮಳಿಗೆ ತೆರೆದು, ಪೀಠೋಪಕರಣಗಳು ಮತ್ತು ಗೃಹೋಪಯೋಗೆ ವಸ್ತುಗಳನ್ನು ಕಡಿಮೆ ಬೆಲೆ ನೀಡಲಾಗುವುದು ಎಂದು ಒಂದೂವರೆ ಕೋಟಿ ರೂ.ಗಳಷ್ಟು ಹಣವನ್ನು ಗ್ರಾಹಕರಿಂದ ಸಂಗ್ರಹಿಸಿ ಈಗ ವಂಚಕರು ಪರಾರಿಯಾಗಿದ್ದಾರೆ. ಲೈಸೆನ್ಸ್ ನೀಡುವಾಗ ಅವರ ಪೂರ್ವಾಪರ ವಿಚಾರಿಸದೆ, ಆಧಾರ್‌ಕಾರ್ಡ್‌ಅನ್ನು ಸೂಕ್ಷ್ಮವಾಗಿ ಪರಿಶೀಲಿಸದೆ ಇರುವುದರಿಂದ ವಂಚನೆಗೆ ದಾರಿಯಾಗಿದೆ ಎಂದು ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಸುರೇಶ್‌ಶೆಟ್ಟಿ, ಕರವೇ ನಗರಾಧ್ಯಕ್ಷ ಮಂಜುನಾಥ್, ಆಟೋ ಚಾಲಕರ ಸಂಘದ ಅಧ್ಯಕ್ಷ ಉಮೇಶ್, ಮಾಜಿ ಅಧ್ಯಕ್ಷ ಮೋಹನ್, ಬೇಟು ಮತ್ತಿತರರು ಅರೋಪಿಸಿದರು.

ತಮಿಳುನಾಡಿನ ಬಾಬುಕೇಶವನ್ ಎಂದು ಸುಳ್ಳು ವಿಳಾಸ, ಆಧಾರ್ ಕಾರ್ಡ್ ನೀಡಿ ಪರವಾನಗಿ ಪಡೆದಿದ್ದಾನೆ ಎಂಬ ಮಾಹಿತಿ ಇದೆ. ಪಂಚಾಯಿತಿ ಅಧಿಕಾರಿಗಳ ಕರ್ತವ್ಯ ಲೋಪದಿಂದ ಅನಾಹುತವಾಗಿದೆ ಎಂದು ದೂರಿದರು.

ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಯಿಂದಾಗಿ ಜನರು ಪರದಾಡುತ್ತಿದ್ದಾರೆ. ವರ್ಕ್‌ಶಾಪ್ ಏರಿಯಾದಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಸಂಘಸಂಸ್ಥೆಗಳ ಪದಾಧಿಕಾರಿಗಳು ಆಗ್ರಹಿಸಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಮಲ್ಟಿಸ್ಟೋರ್ ಯೋಜನೆ ರೂಪಿಸಬೇಕು. ಯೋಜನೆ ಕೇಂದ್ರ ಸರ್ಕಾರದಿಂದಲೂ ಅನುದಾನ ಸಿಗಲಿದೆ ಎಂದು ಚೆಂಬರ್‌ಆಫ್ ಕಾಮರ್ಸ್ ಅಧ್ಯಕ್ಷ ಧನರಾಜ್ ಸಲಹೆ ನೀಡಿದರು.

ಪಪಂ ಉಪಾಧ್ಯಕ್ಷೆ ಮೋಹಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್.ಮಹೇಶ್, ಸದಸ್ಯರಾದ ಪಿ.ಕೆ.ಚಂದ್ರು, ಬಿ.ಸಿ.ವೆಂಕಟೇಶ್, ಶುಭಕರ್, ಕಿರಣ್ ಉದಯಶಂಕರ್, ವಿನಯ್, ಮುಖ್ಯಾಧಿಕಾರಿ ಸತೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net