ಜನಸಾಮಾನ್ಯರಿಗೆ ಯೋಜನೆ ತಲುಪಿಸಿ

Banahatti
Published on

ನರಗುಂದ: ತಾಲೂಕಿನ ಬನಹಟ್ಟಿ ಗ್ರಾಪಂ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯ ಚಂದ್ರಪ್ಪ ವಿಠ್ಠಪ್ಪ ಜಾಧವ ಹಾಗೂ ಉಪಾಧ್ಯಕ್ಷೆಯಾಗಿ ಜಯವ್ವ ಬಸಪ್ಪ ತಳವಾರ ಆಯ್ಕೆಯಾದರು.

ಚುನಾವಣೆ ಅಧಿಕಾರಿ ಸಂತೋಷಕುಮಾರ ಪಾಟೀಲ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಅಧ್ಯಕ್ಷ, ಉಪಾಧ್ಯಕ್ಷರು ಮಾಡಬೇಕು ಎಂದರು.

ಗ್ರಾಪಂ ಸದಸ್ಯರಾದ ಕಸ್ತೂರೆವ್ವ ಚೆಲುವಣ್ಣವರ, ಬಸವ್ವ ಮ್ಯಾಗೇರಿ, ಶಶಿಕಲಾ ಕುರಿ, ಶಿವಕುಮಾರ ಕಲ್ಲಾಪೂರ, ಪಾರ್ವತೆವ್ವ ಗೌಡಪ್ಪಗೌಡ್ರ, ರುದ್ರಪ್ಪ ಬಂಡಿ, ರುದ್ರಗೌಡ ಭರಮಗೌಡ್ರ, ಬಸನಗೌಡ ಮಲ್ಲನಗೌಡ್ರ, ಸಿದ್ದವ್ವ ಮಡಿವಾಳರ, ಬಸವ್ವ ಕರಮುಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಂ.ಪೂಜಾರ, ಬಿಜೆಪಿ ಮುಖಂಡರಾದ ಗುರಪ್ಪ ಆದೆಪ್ಪನವರ, ಈಶ್ವರಗೌಡ ಪಾಟೀಲ, ವೈ.ಆರ್. ಗೌಡಪ್ಪಗೌಡ್ರ, ಚಂದ್ರಪ್ಪ ಈಟಿ, ಬಿ.ಆರ್. ಪಾಟೀಲ, ಮುತ್ತಪ್ಪ ಚವಣಿಮನಿ, ಮುತ್ತನಗೌಡ ಪರ್ವತಗೌಡ್ರ, ಭೀಮಪ್ಪ ಕಡ್ಲಿಕೊಪ್ಪ, ಮಂಜು ಬ್ಯಾಹಟ್ಟಿ, ಟಿ.ಬಿ.ಪಾಟೀಲ, ಯಲ್ಲಪ್ಪ ಭೋಸಲೆ ಹಾಗೂ ಬನಹಟ್ಟಿ, ಮೂಗನೂರ, ಕುರ್ಲಗೇರಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net