ಮಕ್ಕಳನ್ನು ಬಹುತ್ವ ವೇದಿಕೆಗೆ ಕರೆತನ್ನಿ

tdl_19-3a
ತೇರದಾಳ ಸಮೀಪದ ಹಳಿಂಗಳಿ ಗ್ರಾಮದ ಶರಣಬಸವೇಶ್ವರ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಾಲ ಅವರನ್ನು ಕಮರಿಮಠದ ಶಿವಾನಂದ ಶ್ರೀಗಳು ಸನ್ಮಾನಿಸಿದರು.
Published on

ತೇರದಾಳ: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗರುತಿಸಿ ಅವರನ್ನು ಪ್ರೋತ್ಸಾಹಿಸುವ ಶಿಕ್ಷಣ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ಶಿವಾನಂದ ಸ್ವಾಮೀಜಿ ಹೇಳಿದರು.

ಹಳಿಂಗಳಿ ಗ್ರಾಮದ ಶರಣಬಸವೇಶ್ವರ ಪ್ರಾಥಮಿಕ ಶಾಲೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತೇರದಾಳ ಪೂರ್ವ ವಲಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಒಂದೇ ತಾಯಿ ಮಕ್ಕಳು ಬೇರೆ-ಬೇರೆ ವಿಷಯದಲ್ಲಿ ಪರಿಣತಿ ಹೊಂದಿರುತ್ತಾರೆ. ಅವರ ಕ್ರಿಯಾಶೀಲತೆಯನ್ನು ಆಟ-ಪಾಠಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಬಹುತ್ವ ಶಕ್ತಿಯುಳ್ಳ ಸಾಂಸ್ಕೃತಿಕ ವೇದಿಕೆಗೂ ಕರೆತರಬೇಕು ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಾಲ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ನಿಂದಾಗಿ ಪ್ರತಿಭಾ ಕಾರಂಜಿಗೆ ಅವಕಾಶವಿರಲಿಲ್ಲ. ಇದೀಗ ಮುಕ್ತ ಅವಕಾಶದಲ್ಲಿ ಮಕ್ಕಳ ಪ್ರತಿಭೆ ಗುರುತಿಸಲು ವೇದಿಕೆ ಕಲ್ಪಿಸುತ್ತಿರುವುದು ಖುಷಿ ವಿಚಾರವಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಶೋಭಾ ಖೇಬೋಜಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಸಿ.ಎಸ್.ಬುರ್ಲಿ, ಡಿ.ಎಂ.ಹಳೆಮನಿ, ಬಿಆರ್‌ಪಿ ಶಿವಪ್ರಕಾಶ ಯಾದವಾಡ, ಸಿಆರ್‌ಪಿ ಎಂ.ಎಂ. ಸೊರಗಾಂವಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ, ಆರ್.ಬಿ.ಬಾಬನ್ನವರ್, ಜಿನ್ನಪ್ಪ ಚೌಗಲಾ, ವಿಠ್ಠಲ ಬುಗಡಿ, ಮಲ್ಲಪ್ಪ ತಮದಡ್ಡಿ, ಭೀಮಪ್ಪ ನಂದಗಾಂವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net