ಸಹಕಾರ ಭಾರತಿಯನ್ನು ಅಧಿಕಾರಕ್ಕೆ ತನ್ನಿ

mla Araga gnanendra
ಶಾಸಕ ಆರಗ ಜ್ಞಾನೇಂದ್ರ
Published on

ಶಿವಮೊಗ್ಗ: ಸಹಕಾರ ಭಾರತಿ ತಂಡ ಅಡಕೆ ಬೆಳೆಗಾರರಿಗೆ ಶಕ್ತಿ ಕೊಡುವ ಕೆಲಸವನ್ನು ಕಳೆದ 20 ವರ್ಷಗಳಿಂದ ಮಾಡಿದೆ. ಬೆಲೆ ಸ್ಥಿರವಾಗಿರಲು ಸಹಕಾರ ಭಾರತಿ ಕಾರಣವಾಗಿದೆ. ಭವಿಷ್ಯದಲ್ಲೂ ಅಡಕೆ ಬೆಳೆಗಾರರ ಹಿತ ಕಾಪಾಡುವ ತಂಡ ಅಗತ್ಯವಿದ್ದು ಈ ಬಾರಿಯೂ ಮ್ಯಾಮ್‌ಕೋಸ್‌ಗೆ ಸಹಕಾರ ಭಾರತಿಯನ್ನೇ ಅಧಿಕಾರಕ್ಕೆ ತರಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಮತದಾರರಿಗೆ ಮನವಿ ಮಾಡಿದರು.

ಫೆ.4ರಂದು ಚುನಾವಣೆ ನಡೆಯಲಿದೆ. ಕಳೆದ ಅವಧಿಯಲ್ಲಿ ಕ್ಲೀನ್‌ಸ್ವೀಪ್ ಮಾಡಲಾಗಿತ್ತು. ಸಹಕಾರ ಭಾರತಿ ತಂಡವನ್ನು ಸಂಪೂರ್ಣವಾಗಿ ಬೆಂಬಲಿಸಬೇಕು. ಎಲ್ಲ ಅಡಕೆ ಬೆಳೆಗಾರರು ಸಹಕಾರ ಭಾರತಿಗೆ ಅವಕಾಶ ನೀಡಿ 19 ಸೀಟುಗಳನ್ನೂ ಗೆಲ್ಲಿಸುವಂತೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮ್ಯಾಮ್ಕೋಸ್ ಬೆಳೆಗಾರರಿಂದ ನೇರವಾಗಿ ಅಡಕೆ ಖರೀದಿ ಮಾಡುತ್ತಿದೆ. ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಕೆ ಮಲೆನಾಡು ಭಾಗದಲ್ಲಿ ಪರಂಪರಾಗತವಾಗಿದೆ. ಮ್ಯಾಮ್ಕೋಸ್ ರೈತರ ನಂಬಿಕೆ ಗಳಿಸಿದ್ದು ತನ್ನ ಸಂಸ್ಥೆಯೆಂದು ರೈತರು ಕೆಲಸ ಮಾಡುತ್ತಿದ್ದಾರೆ. 2005-06ರಲ್ಲಿ ಸಹಕಾರ ಭಾರತಿಯು ಮ್ಯಾಮ್ಕೋಸ್‌ನ ಅಧಿಕಾರ ಹಿಡಿದು ಬದಲಾವಣೆ ಮಾಡಿತ್ತು. ಅಂದಿನಿಂದ ಇದುವರೆಗೂ ರೈತರ ಹಿತ ಕಾಪಾಡಿಕೊಂಡು ಬಂದಿದೆ ಎಂದರು.

ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಕೆ.ವಿ.ಅಣ್ಣಪ್ಪ, ಪಾಲಿಜೆ ಮಾಜಿ ಸದಸ್ಯ ಪ್ರಭಾಕರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net