ವಂಚಕರನ್ನು ಬಂಽಸಿ ಮುಗ್ದ ಜನರನ್ನು ರಕ್ಷಿಸಿ

30 RPT 1
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಉಪಾಧ್ಯಕ್ಷೆ ಸೀಮಾ ಸೆರವೋ ನೇತೃತ್ವದಲ್ಲಿ ವಂಚಕರ ಬಂಧನಕ್ಕೆ ಆಗ್ರಸಲಾಯಿತು. ಆದರ್ಶ, ನವೀನ್, ಅರ್ಜುನ್, ನೌಷಾದ್ ಇತರರಿದ್ದರು.
Published on

ರಿಪ್ಪನ್‌ಪೇಟೆ: ಮಲೆನಾಡಿನ ಮುಗ್ದ ಯುವಕ-ಯುವತಿಯರನ್ನು ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿರುವ ವಂಚಕರನ್ನು ಕೂಡಲೇ ಬಂಽಸಬೇಕೆAದು ಕರ್ನಾಟಕ ರಕ್ಷಣಾ ವೇದಿಕೆಯ ಪದಾಽಕಾರಿಗಳು ಆಗ್ರಹಿಸಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಜಿಲ್ಲಾ ರಕ್ಷಣಾ ವೇದಿಕೆಯ ಉಪಾಧ್ಯಕ್ಷೆ ಸೀಮಾ ಸೆರವೋ ಮಾತನಾಡಿ, ರಿಪ್ಪನ್‌ಪೇಟೆಯ ಶ್ವೇತಾ ಎಂಬ ಮಹಿಳೆ ವಿಜಾಪುರ ಪ್ರಶಾಂತ್ ದೇಶಪಾಂಡೆ ಎಂಬುವವರೊAದಿಗೆ ಗುರುತಿಸಿಕೊಂಡು ನಾನೊಬ್ಬಳು ಬ್ಯೂಟೀಷಿಯನ್ ಎಂದು ಹೇಳಿಕೊಳ್ಳುತ್ತ ಅನೇಕ ಮುಗ್ದರನ್ನು ವಂಚಿಸಿದ್ದಾಳೆ. ಇವರ ಈ ಕೆಲಸಗಳು ಶಿವಮೊಗ್ಗ, ಚಿಕ್ಕಮಗಳೂರು, ಬಾಗಲಕೋಟೆ, ಹುಬ್ಬಳ್ಳಿ, ಬೆಂಗಳೂರುಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ನಿರುದ್ಯೋಗಿ ಮುಗ್ದ ಜನರನ್ನೇ ಗುರಿಯಾಗಿಸಿಕೊಳ್ಳುತ್ತಿದ್ದು, ಅದರಲ್ಲಿ ಕೆಲವರು ಮಾತ್ರ ಅವಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿ ನ್ಯಾಯಕ್ಕಾಗಿ ವಿನಂತಿಸಿದ್ದಾರೆ. ಶ್ವೇತಾ ಗಣ್ಯಾತೀಗಣ್ಯರ ಜತೆಗಿನ ಫೋಟೋಗಳನ್ನು ತೋರಿಸಿ ನಾನು ಅವರ ಪಿಎ ಆಗಿದ್ದು, ನಿಮ್ಮಗಳ ಕೆಲಸ ಕಾರ್ಯಗಳನ್ನು ಮಾಡಿಸಿಕೊಡುತ್ತೇನೆ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ರಾಜಕಾರಣಿಗಳೊಂದಿಗಿನ ಒಡನಾಟವನ್ನು ಫೋಟೋದಲ್ಲಿ ನೋಡಿದ ಜನ ಸುಲಭವಾಗಿ ಅವಳ ಮೋಸದ ಜಾಲಕ್ಕೆ ಬೀಳುತ್ತಿದ್ದಾರೆ. ರಾಜಕೀಯ ಪಕ್ಷ ಹಾಗೂ ನಾಯಕರುಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚನೆ ನಡೆಸುತ್ತಿರುವುದು ತಿಳಿದುಬಂದಿದೆ. ಹಾಗಾಗಿ ರಾಜಕೀಯ ನಾಯಕರು ಇಂಥವರ ಬಗ್ಗೆ ಎಚ್ಚರ ವಹಿಸಬೇಕು. ಪೊಲೀಸ್ ಇಲಾಖೆ ಆರೋಪಿಗಳನ್ನು ಕೂಡಲೇ ಬಂಽಸಿ, ವಂಚನೆಗೊಳಗಾದ ಅಮಾಯಕರಿಗೆ ನ್ಯಾಯ ಒದಗಿಸಿಕೊಡಬೇಕು. ಇಂಥಹ ಘಟನೆ ಮರುಕಳಿಸದಂತೆ ಸೂಕ್ತ ತನಿಖೆ ಹಾಗೂ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ದೂರುದಾರರಾದ ಆದರ್ಶ, ನವೀನ್, ಅರ್ಜುನ, ರಕ್ಷಣಾ ವೇದಿಕೆಯ ಮುಖಂಡರಾದ ನೌಷಾದ್, ಅಜೀಮ್, ಕಿರಣ, ಅಕೀಲ್, ರಾಹಿಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net