ಮನೆಯಿಂದಲೇ ಕುಡಿಯಲು ಬಿಸಿನೀರು ತನ್ನಿ ಬಿಇಒ ಸಿ.ನಾಗರಾಜ ಮಾಹಿತಿ

Hadagali SSLC Exam Preparation
ಹೂವಿನಹಡಗಲಿಯ ಜಿಪಿಜಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಹಸೀಲ್ದಾರ್ ಕೆ.ವಿಜಯಕುಮಾರ್, ತಾಪಂ ಇಒ ವಿಜಯಕುಮಾರ್ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧ್ದತೆ ಪರಿಶೀಲಿಸಿದರು.
Published on

ಹೂವಿನಹಡಗಲಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಶಿಕ್ಷಣ ಇಲಾಖೆ ಸಿದ್ಧ್ದತೆಗಳನ್ನು ಮಾಡಿಕೊಂಡಿದೆ. ಪರೀಕ್ಷೆಗಾಗಿ ತಾಲೂಕಿನಲ್ಲಿ 9 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.3270 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪಟ್ಟಣದ ಎಸ್‌ಕೆಜಿಜಿ. ಪ್ರೌಢಶಾಲೆ, ಜಿಪಿಜಿ, ಎಂಎಂಟಿ ಸರ್ಕಾರಿ ಪ್ರೌಢ ಶಾಲೆ, ಸೋವೇನಹಳ್ಳಿ, ವಿಕೆಕೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ಹಿರೇಹಡಗಲಿ, ಸರ್ಕಾರಿ ಪ್ರೌಢ ಶಾಲೆ ಹೊಳಲು, ಉತ್ತಂಗಿ, ಟಿಎಂಎಎಸ್ ಸರ್ಕಾರಿ ಪ್ರೌಢಶಾಲೆ ನಾಗತಿ ಬಸಾಪುರ, ಸರ್ಕಾರಿ ಪ್ರೌಢ ಶಾಲೆ ಬೂದನೂರು ಶಾಲೆಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಗ್ರಾಮೀಣ ಭಾಗಗಳಿಂದ ಬರುವ ವಿದ್ಯಾರ್ಥಿಗಳಿಗೆ 14 ಖಾಸಗಿ ವಾಹನ, 4 ಕೆಎಸ್ಸಾರ‌್ಟಿಸಿ ಬಸ್‌ಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯಲು ಬಿಸಿನೀರನ್ನು ತರಬೇಕು, ತರದೇ ಇರುವ ವಿದ್ಯಾರ್ಥಿಗಳಿಗೆ ನೀರಿನ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಬಿಇಒ ಸಿ.ನಾಗರಾಜ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net