

ನೆಲಮಂಗಲ: ಸಮಾಜದಲ್ಲಿರುವ ಅಂಗವಿಕಲರಿಗೆ ಆಸರೆಯಾಗಿ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕು ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿ ಶನಿವಾರ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಮಾಡಿ ಮಾತನಾಡಿದರು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿನ 4.60 ಲಕ್ಷ ಅನುದಾನದಲ್ಲಿ 6 ಜನ ಅಂಗವಿಕಲರಿಗೆ ಸಂಚಾರದ ಅನುಕೂಲಕ್ಕಾಗಿ ದ್ವಿಚಕ್ರ ಮೋಟಾರು ವಾಹನ ವಿತರಣೆ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಗೌತಮ್‌ರಾಜ್ ಮಾತನಾಡಿ, ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ್ದ ಶೇ.75ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿದ್ದ ಅಂಗವಿಕಲರಿಗೆ ಮಾತ್ರ ನೀಡಲಾಗುವುದು ಎಂದರು.
ಜಿಪಂ ಸದಸ್ಯ ಟಿ.ತಿಮ್ಮರಾಪ್ಪ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ರಂಗನಾಥ್, ಸದಸ್ಯ ಎಂ.ವಿ.ರುದ್ರೇಶ್, ವೆಂಕಟೇಗೌಡ, ಸಲೀಂಪಾಷಾ, ಯೋಜನಾ ಸಹಾಯಕ ಎಂ.ನಿಖಿಲ್, ಎಂ.ಪಿ.ಗಿರೀಶ್, ತಾಪಂ ಇಒ ಲಕ್ಷ್ಮೀನಾರಾಯಣ್, ಸಹಾಯಕ ನಿರ್ದೇಶಕ ಡಿ.ಎಂ.ಪದ್ಮನಾಭ್ ಮತ್ತಿತರರಿದ್ದರು.