

ಮೂಲ್ಕಿ: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದ್ದು, ಶಾಲೆಯ ಗತಕಾಲದ ವೈಭವ ಮರಳಿಸಲು ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು, ದಾನಿಗಳು ಮುಂದಾಗಬೇಕು ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.
122 ವರ್ಷ ಪೂರೈಸಿದ ಪಡುಪಣಂಬೂರು ಸರ್ಕಾರಿ ಪ್ರಾಥಮಿಕ ಶಾಲೆಗೆ ವಿವೇಕ ಯೋಜನೆಯಡಿ 28 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 2 ಶಾಲಾ ಕೊಠಡಿಗಳು, ಮತ್ತಿತರ ಸೌಲಭ್ಯಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ದಾನಿಗಳಾದ ಶ್ಯಾಮ್ ಪ್ರಸಾದ್, ಉದ್ಯಮಿ ಅಜಿತ್ ಕೆರೆಕಾಡು, ವಿಜಯ ಶೆಟ್ಟಿ ಕೋಲ್ನಾಡು, ವಿನೋದ್ ಸಾಲ್ಯಾನ್ ಅವರನ್ನು ಗೌರವಿಸಲಾಯಿತು. ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷೆ ಕುಸುಮಾ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಪಂಚಾಯಿತಿ ಉಪಾಧ್ಯಕ್ಷ ಹೇಮನಾಥ ಅಮೀನ್, ಮೂಲ್ಕಿ ಅರಮನೆ ಚಾರಿಟೆಬಲ್ ಟ್ರಸ್ಟ್ ನಿರ್ದೇಶಕ ಗೌತಮ್ ಜೈನ್, ರತ್ನಾಕರ ಯಾನೆ ಕಾಂತಣ್ಣ ಗುರಿಕಾರ, ನಿವೃತ್ತ ಹಿರಿಯ ಶಿಕ್ಷಕ ರಾಮ ರಾವ್, ರಾಮಚಂದ್ರ ನಾಯ್ಕ ಕೊಲ್ನಾಡು, ಕದ್ರಿ ಹಿಲ್ಸ್ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್, ಶಾಲಾ ಕಟ್ಟಡ ಸಮಿತಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು, ಹಳೇ ವಿದ್ಯಾರ್ಥಿ ಸಂದ ಅಧ್ಯಕ್ಷ ಉಮೇಶ್ ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷೆ ರೂಪಕಲಾ, ಮುಖ್ಯಶಿಕ್ಷಕಿ ಸುಕನ್ಯಾ, ಉದ್ಯಮಿ ಅಜಿತ್ ಕೆರೆಕಾಡು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ, ಸಿ.ಆರ್.ಪಿ. ಜ್ಯೋತಿ ಕಾರ್ವಿ ಮತ್ತಿತರರಿದ್ದರು. ಪ್ರಧಾನ ಕಾರ್ಯದರ್ಶಿ ಜನಾರ್ದನ ಪಡುಪಣಂಬೂರು ನಿರೂಪಿಸಿದರು.