ಬೃಂದಾವನ ಕಾರಂಜಿ ನವೀಕರಣ

09-01-25--krs2 (1)
ಕೆಆರ್‌ಎಸ್‌ಗೆ ಇತ್ತೀಚೆಗೆ ಭೇಟಿ ನೀಡಿದ್ದ ಆರ್.ಚಲುವರಾಯಸ್ವಾಮಿ ಅವರಿಗೆ ರಮೇಶ ಬಂಡಿಸಿದ್ದೇಗೌಡ ಬೃಂದಾವನ ವಾಸ್ತವ ಸ್ಥಿತಿ ಬಗ್ಗೆ ಮಾಹಿತಿ ನೀಡಿದರು. ದಿನೇಶ್ ಗೂಳಿಗೌಡ, ಡಾ.ಕುಮಾರ, ಮಲ್ಲಿಕಾರ್ಜುನ ಬಾಲದಂಡಿ, ಮಹೇಶ್ ಇತರರಿದ್ದರು.
Published on

ಹಣ ಬಿಡುಗಡೆ ರಮೇಶ್ ಬಂಡಿಸಿದ್ದೇಗೌಡ ಮನವಿ

ಕೆ.ಆರ್.ಸಾಗರ : ವಿಶ್ವವಿಖ್ಯಾತ ಕೃಷ್ಣರಾಜಸಾಗರದ ಮೊಗಲ್ ಶೈಲಿಯಲ್ಲಿರುವ ಬೃಂದಾವನದ ಎರಡು ಭಾಗಗಲ್ಲಿನ ಕಾರಂಜಿ ಹಾಗೂ ಉದ್ಯಾನ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಂತೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸರ್ಕಾರಕ್ಕೆ ಮನವಿ ಮಾಡಿದರು.

ಕೆಆರ್‌ಎಸ್ ಬೃಂದಾವನದಲ್ಲಿ ಇತ್ತೀಚೆಗೆ ನಡೆದ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಬೃಂದಾವನ ವೀಕ್ಷಣೆ ವೇಳೆ ಮಾತನಾಡಿ, ಪ್ರಸ್ತುತ ಉದ್ಯಾನದ ಎರಡು ಮಹಡಿಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಕಾರಂಜಿಗಳ ನವೀಕರಣ ಕೆಲಸ ಮುಗಿದಿದೆ. ಉಳಿದ ಎರಡು ಮಹಡಿಗಳ ಉದ್ಯಾನದ ಕಾರಂಜಿಗಳ ನವೀಕರಣ ಹಾಗೂ ಬೃಂದಾವನದ ಪಾದಚಾರಿ ಮಾರ್ಗ ತುಂಬ ಹದಗೆಟ್ಟಿದ್ದು, ಶೀಘ್ರವೇ ಅಭಿವೃದ್ಧಿ ಕೆಲಸ ಆಗಬೇಕಾಗಿದೆ. ಆದ್ದರಿಂದ ರಾಜ್ಯ ಸರ್ಕಾರದ ವತಿಯಿಂದ 10 ಕೋಟಿ ರೂ. ಬಿಡುಗಡೆ ಮಾಡಿದರೆ ಅನುಕೂಲವಾಗಲಿದೆ ಎಂದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಚಲುವರಾಯಸ್ವಾಮಿ, ಬೃಂದಾವನ ಪ್ರಸ್ತುತ ಪರಿಸ್ಥಿತಿಯನ್ನು ಖುದ್ದು ವೀಕ್ಷಣೆ ಮಾಡಿದ್ದೇನೆ. ಬೃಂದಾವನ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಳಿ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಕುಮಾರ, ಎಸ್‌ಪಿ ಮಲ್ಲಿಜಾರ್ಜುನ ಬಾಲದಂಡಿ, ಕಾವೇರಿ ನೀರಾವರಿ ನಿಗಮದ ಮುಖ್ಯ ವ್ಯವಸ್ಥಾಪಕ ಮಹೇಶ್, ಮುಖ್ಯ ಇಂಜಿನಿಯರ್ ವೆಂಕಟೇಶ್, ಅಧೀಕ್ಷಕ ಇಂಜಿನಿಯರ್ ರಘುರಾಮ್, ಕಾರ್ಯಪಾಲಕ ಇಂಜಿನಿಯರ್ ಜಯಂತ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಫಾರೂಕ್ ಅಭು, ಕಿಶೋರ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net