ಬೃಂದಾವನ ಬಡಾವಣೆಯಲ್ಲಿ ಹುತ್ತರಿ ಸಂಭ್ರಮ

28Kush03
Published on

ಕುಶಾಲನಗರ: ಪಟ್ಟಣದ ಮುಳ್ಳುಸೋಗೆ ಗ್ರಾಮದ ಗುಮ್ಮನಕೊಲ್ಲಿಯ ಬೃಂದಾವನ ಬಡಾವಣೆಯಲ್ಲಿ ಸೋಮವಾರ ರಾತ್ರಿ ಹುತ್ತರಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಬಡಾವಣೆಯ ನಿವಾಸಿ ಮೇಲಮನೆ ಎಂ.ಎನ್.ಕಾಳಪ್ಪ ಅವರ ಮನೆಯಲ್ಲಿ ನೆರೆ ಕಟ್ಟಲಾಯಿತು. ಬಳಿಕ ಅವರ ಗದ್ದೆಗೆ ತೆರಳಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಕದಿರು ತೆಗೆಯಲಾಯಿತು. ಬಳಿಕ ಮನೆಗೆ ವಾಪಸ್ ಬಂದು ಎಲ್ಲ ಕುಟುಂಬಗಳ ಹಿರಿಯರಿಗೆ ಕದಿರು ವಿತರಿಸಲಾಯಿತು. ಹೊಸ ಅಕ್ಕಿಯೊಂದಿಗೆ ಸಿದ್ಧಗೊಳಿಸಿದ ಖಾದ್ಯಗಳನ್ನು ಉಣಬಡಿಸಲಾಯಿತು.

ಹುತ್ತರಿ ಹಬ್ಬದ ಸಂಘಟಕ ಎಂ.ಎನ್.ಕಾಳಪ್ಪ ಮಾತನಾಡಿ, ನಮ್ಮ ಬಡಾವಣೆಯಲ್ಲಿ ಕಳೆದ 10 ವರ್ಷಗಳಿಂದ ಹುತ್ತರಿ ಹಬ್ಬವನ್ನು ಎಲ್ಲ ನಿವಾಸಿಗಳು ಜತೆಗೂಡಿ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದೇವೆ ಎಂದರು.

ಬಡಾವಣೆಯ ಪ್ರಮುಖರಾದ ಹಂಡ್ರಂಗಿ ಜೆ.ನಾಗರಾಜ್, ಜಿ.ಬಿ.ಪೂವಯ್ಯ, ಉಮಾದೇವಿ, ಮಹೇಂದ್ರ, ಜಗನ್ನಾಥ್, ಶ್ರೀನಿವಾಸ್, ವನಿತಾ, ರಾಣಿ, ಲಲಿತಾ, ಮೀನಾಕ್ಷಿ, ಜಯಪ್ರಕಾಶ್, ಕೂಡಕಂಡಿ ಸೋಮಪ್ಪ್, ಎಂ.ಎನ್.ಕುಮಾರಪ್ಪ, ಆರ್.ಪಿ.ಲಕ್ಷ್ಮಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net