

ಕನಕಗಿರಿ: ವಿದ್ಯಾರ್ಥಿ ಹಾಗೂ ಉಪನ್ಯಾಸಕರ ನಡುವೆ ಉತ್ತಮ ಬಾಂಧವ್ಯವಿದ್ದಾಗ ಕಾಲೇಜು ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ಮಸ್ಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ.ರಾಮಣ್ಣ ಜುಮ್ಮಾ ಹೇಳಿದರು.
ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅಂತಿಮ ವಷರ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಪನ್ಯಾಸಕರಾದವರು ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಧಾರೆ ಎರೆದು ಅವರ ಭವಿಷ್ಯ ಉಜ್ವಲಗೊಳಿಸಬೇಕು. ಬೋಧಿಸಲು ಉಪನ್ಯಾಸಕರು ಪೂರ್ವ ತಯಾರಿ ಮಾಡಿಕೊಂಡಿರಬೇಕು ಎಂದರು.
ಇದನ್ನೂ ಓದಿ: ಲಿಂಗರಾಜ ಪಿಯು ಕಾಲೇಜು ವಿದ್ಯಾರ್ಥಿಗಳ ಅಪ್ರತಿಮ ಸಾಧನೆ
ಶ್ರೀರಾಮನಗರ ಕಾಲೇಜು ಉಪನ್ಯಾಸಕ ಡಾ.ಸರ್ಫರಾಜ ಅಹ್ಮದ್ ಮಾತನಾಡಿ, ಹಲವು ವಷರ್ಗಳಿಂದ ಕಾಲೇಜಿನ ಉಪನ್ಯಾಸಕನಾಗಿ, ಪ್ರಭಾರ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದು, ಪಟ್ಟಣದ ಜನತೆ, ಜನಪ್ರತಿನಿಧಿಗಳು, ಹಳೆಯ ವಿದ್ಯಾರ್ಥಿಗಳು ಕಾಲೇಜು ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದರು.
ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಡಾ.ರಾಮಣ್ಣ ಎಜೆಕೆ, ಡಾ.ಸರ್ಫರಾಜ ಅಹ್ಮದ್, ಶೋಭಾ ಎಸ್. ಕಣ್ಣಿಯನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ಡಾ.ವೀರೇಶ ಕೆಂಗಲ್, ಲಲಿತಾ ಕಿನ್ನಾಳ, ಗೋಪಾಲ ರೆಡ್ಡಿ, ಬಾಳಪ್ಪ ಸುಳೇಕಲ್, ಶರಣಪ್ಪ ಇತರರಿದ್ದರು.