ಉಜ್ವಲ ಭವಿಷ್ಯದತ್ತ ಮುನ್ನುಗ್ಗಿ: ಜಿಲ್ಲಾಧಿಕಾರಿ ರೋಷನ್​ ಕರೆ

2manju4
ಬೆಳಗಾವಿ ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​, ಜಿಪಂ ಸಿಇಒ ರಾಹುಲ ಶಿಂಧೆ ಸನ್ಮಾನಿಸಿದರು. ಎಸ್ಪಿ ಡಾ.ಭೀಮಾಶಂಕರ ಗುಳೇದ, ಪೊಲೀಸ್​ ಆಯುಕ್ತ ಇಡಾ ಮಾರ್ಟಿನ್​ ಮಾರ್ಬನ್ಯಾಂಗ್​ ಇತರರಿದ್ದರು.
Published on
ಬೆಳಗಾವಿ: ದ್ವೀತಿಯ ಪಿಯು ಪರೀಕ್ಷೆಯಲ್ಲಿ ಮಕ್ಕಳ ಸಾಧನೆ ಜಿಲ್ಲೆಗೆ ಕೀರ್ತಿ ತಂದಿದೆ. ಪಿಯುಸಿ ಮುಂದಿನ ಶಿಣದ ಟರ್ನಿಂಗ್​ ಪಾಯಿಂಟ್​ ಇದ್ದಂತೆ. ಕಲಿಕೆ ಎಂದಿಗೂ ಮುಗಿಯದ ಪ್ರಕ್ರಿಯೆಯಾಗಿದ್ದು, ಸಾಧನೆ ಇಲ್ಲಿಗೆ ಮುಗಿಯಿತು ಎಂದುಕೊಳ್ಳದೆ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ ತಿಳಿಸಿದರು.
ಇಲ್ಲಿನ ಜಿಪಂ ಸಭಾಂಗಣದಲ್ಲಿ ಬುಧವಾರ 2024&25ನೇ ಸಾಲಿನ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮತ್ತು ಜಿಲ್ಲೆಗೆ ಅತ್ಯುತ್ತಮ ರ್ಯಾಂಕ್​ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ವಾಣಿಜ್ಯ ವಿಭಾಗದಲ್ಲಿ 597 ಅಂಕ ಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ತನ್ವಿ ಪಾಟೀಲ, ಕಲಾ ವಿಭಾಗದಲ್ಲಿ 580 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಹಾಲಕ್ಷಿ$್ಮ ಕುಸುಗುರ ಹಾಗೂ ವಿಜ್ಞಾನ ವಿಭಾಗದಲ್ಲಿ 589 ಅಂಕ ಪಡೆದ ಸಾನಿಯಾ ಸನದಿ ಹಾಗೂ ಸೃಷ್ಟಿ ದಿಗ್ಗಾಯಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಾಣಿಜ್ಯ ವಿಭಾಗದಲ್ಲಿ 587 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪೂಜಾ ಸುತಾರ, ಕಲಾ ವಿಭಾಗದಲ್ಲಿ 594 ಅಂಕ ಪಡೆದು ರಾಜ್ಯಕ್ಕೆ 4ನೇ ರ್ಯಾಂಕ್​ ಪಡೆದ ಕಾವೇರಿ ಮಲ್ಲಾಪೂರೆ ಹಾಗೂ ವಿಜ್ಞಾನ ವಿಭಾಗದಲ್ಲಿ 592 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಅಂಕಿತಾ ಲಗಮಣ್ಣವರನ್ನು ಸನ್ಮಾನಿಸಲಾಯಿತು.
ಎಸ್​ಪಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ಈ ಸಾಧನೆ ತಲೆಗೇರಿಸಿಕೊಳ್ಳಬಾರದು. ಇನ್ನು ಹೆಚ್ಚಿನ ಪ್ರಯತ್ನಿಸಿ ಉನ್ನತ ಹುದ್ದೆ ಪಡೆದು ದೇಶಕ್ಕೆ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಜಿಪಂ ಸಿಇಒ ರಾಹುಲ ಶಿಂಧೆ ಮಾತನಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಅಕ್ರಂ ಪಾಷ, ನಗರ ಪೊಲೀಸ್​ ಆಯುಕ್ತ ಇಡಾ ಮಾರ್ಟಿನ್​ ಮಾರ್ಬನ್ಯಾಂಗ್​, ಬಸವರಾಜ ಹೆಗ್ಗನಾಯಕ, ಬಸವರಾಜ ಅಡವಿಮಠ, ಗಂಗಾಧರ ದಿವಟರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net