

ಯಲಬುರ್ಗಾ: ನಿರಂತರ ಕಠಿಣ ಅಧ್ಯಯನ ಮಾತ್ರ ಉನ್ನತ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಉಪಾಧ್ಯಕ್ಷ ಸುಧೀರ ಕೊರ್ಲಹಳ್ಳಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ, ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಬದುಕು ಉಜ್ವಲಗೊಳ್ಳುತ್ತದೆ. ಪದವಿ ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚು ಚೈತನ್ಯಶೀಲರಾಗಬೇಕಿದೆ. ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಪ್ರಾಚಾರ್ಯ ಕೆ.ಎಚ್.ಛತ್ರದ, ಸಿಡಿಸಿ ಸದಸ್ಯರಾದ ಜಯಶ್ರೀ ಕಂದಕೂರು, ಲಿಂಗರಾಜ ಪಾಟೀಲ್ ಮಾತನಾಡಿದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಪ್ರಾಧ್ಯಾಪಕರಾದ ಎಚ್.ಎಂ.ಗುಡಿಹಿಂದಿನ್, ಬಿ.ಶಶಿಧರ್, ಸಿಡಿಸಿ ಪದಾಧಿಕಾರಿಗಳಾದ ಬಸವರಾಜ ಈಳಿಗೇರ್, ವಿಕಾಸ ಉಳ್ಳಾಗಡ್ಡಿ, ಲಕ್ಷ್ಮೀ ಛಲವಾದಿ, ಕಳಕೇಶ ಸೂಡಿ, ವಿರೂಪಾಕ್ಷಯ್ಯ ಗಂಧದ, ಬಸವರಾಜ ಓಂಟೇಲಿ, ಉಪನ್ಯಾಸಕರಾದ ವಿರೇಶ ಗಡಾದ, ಮಂಜುನಾಥ ಗುಡ್ಲಾನೂರು, ಅನಿಲ್, ನಂದಾ ಇತರರಿದ್ದರು.