

ಎನ್.ಆರ್.ಪುರ: ಗಣಿತ ಎಂಬುವುದು ಕೇವಲ ಪಾಠವಲ್ಲ, ಕಲಿಕೆಯಲ್ಲ, ಜೀವನದ ಒಂದು ಅಂಗ ಎಂದು ಎಚ್.ಇ.ದಿವಾಕರ ಹೇಳಿದರು.
ತಾಲೂಕಿನ ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಗಣಿತ ಕಲಿಕಾ ಆಂದೋಲನದಡಿ ಆಯೋಜಿಸಿದ್ದ ಗಣಿತ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲ ರೀತಿಯ ವ್ಯವಹಾರ ಮಾಡಲು ಗಣಿತ ಜ್ಞಾನ ಹೊಂದಿರಬೇಕು. ಗಣಿತದಲ್ಲಿ ಹೆಚ್ಚಿನ ಆಸಕ್ತಿ ತೋರಿದರೆ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ. ಗಣಿತ ವಿಷಯದಲ್ಲಿ ಪರಿಣಿತಿ ಹೊಂದಿದರೆ ಆರ್ಥಿಕ ತಜ್ಞರಾಗಬಹುದು ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ಶಾಲೆಯಲ್ಲಿ ಇಲಾಖೆಯವರು ಗಣಿತ ಸ್ಪರ್ಧೆ ನಡೆಸುತ್ತಿರುವುದು ಶ್ಲಾಘನೀಯ. ಇದರಿಂದ ಮಕ್ಕಳಲ್ಲಿನ ಗಣಿತ ಜ್ಞಾನ ವೃದ್ಧಿಯಾಗಲಿದೆ ಎಂದು ತಿಳಿಸಿದರು.
ಗಣಿತ ಸ್ಪರ್ಧೆಯನ್ನು ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು. ಸೀತೂರು ಗ್ರಾಪಂ ಅಧ್ಯಕ್ಷೆ ರೇಖಾ ಅಶೋಕ್, ಉಪಾಧ್ಯಕ್ಷೆ ಪ್ರೇಮಾ, ಸದಸ್ಯರಾದ ಉಪೇಂದ್ರರಾವ್, ಮುಖ್ಯಶಿಕ್ಷಕ ಸುರೇಶ್, ಸಹ ಶಿಕ್ಷಕರಾದ ಬಸಪ್ಪ, ಗವಿರಂಗಪ್ಪ ಇದ್ದರು.