ಕೊಚ್ಚಿ ಹೋದ ಸೇತುವೆ

4adarshkdga4
Published on

ಮಡಿಕೇರಿ: ಬೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ ಸೇತುವೆ ಕೊಚ್ಚಿಹೋಗಿರುವ ಘಟನೆ ಗುರುವಾರ ನಡೆದಿದೆ.


ಮಡಿಕೇರಿ ತಾಲೂಕಿನ ಸಂಪಾಜೆಯಲ್ಲಿ ಕಳೆದ ೨೪ ಗಂಟೆಯಲ್ಲಿ ೧೦೫.೫೦ ಮಿ.ಮೀ ಮಳೆಯಾಗಿದೆ. ಪರಿಣಾಮ ಪಯಶ್ವಿನಿ ನದಿ ಉಕ್ಕಿ ಹರಿಯುತ್ತಿದೆ. ಜತೆಗೆ ಸಂಪಾಜೆ ವ್ಯಾಪ್ತಿಯ ಚೆಂಬು ಗ್ರಾಮದಲ್ಲೂ ಕೂಡ ಮಳೆಯ ಆರ್ಭಟ ಮುಂದುವರಿದೆ. ಪರಿಣಾಮ ಚೆಂಬು ಗ್ರಾಮದ ಮರ್ಕಡ್ಕ ಬಳಿ ಸೇತುವೆಗೆ ಹಾನಿಯಾಗಿದ್ದು, ಚೆಂಬು-ಕಲ್ಲುಗುಂಡಿ ಸಂಪರ್ಕ ರಸ್ತೆ ಕಡಿತಗೊಂಡಿದೆ.


೩೦ ಕುಟುಂಬ: ಸೇತುವೆ ಹಾನಿಯಾದ ಪರಿಣಾಮ ಸುಮಾರು ೩೦ ಕುಟುಂಬಗಳ ಸಂಪರ್ಕ ಕಡಿತಗೊಂಡಿದೆ. ಅಗತ್ಯ ವಸ್ತುಗಳ ಖರೀದಿಗೆ ಗ್ರಾಮಸ್ಥರು ಸಂಪಾಜೆ ಮತ್ತು ಕಲ್ಲಗುಂಡಿ ಸ್ಥಳಕ್ಕೆ ಆಗಮಿಸಬೇಕಾದ ಹಿನ್ನೆಲೆ ಮಳೆ ನಿಂತ ಕೂಡಲೇ ಜಿಲ್ಲಾಡಳಿತ ಆದಷ್ಟು ಶೀಘ್ರದಲ್ಲಿ ಸೇತುವೆ ದುರಸ್ತಿಗೊಳಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net