ಸೇತುವೆ, ರೈಲ್ವೆ ಸಂಪರ್ಕಕ್ಕೆ ಕ್ರಮವಹಿಸಿ

Published on

ಕಂಪ್ಲಿ: ಇಲ್ಲಿನ ತುಂಗಭದ್ರಾ ನದಿಗೆ ನೂತನ ಸೇತುವೆ ನಿರ್ಮಾಣ, ರೈಲ್ವೆ ಸಂಪರ್ಕ ಕುರಿತಂತೆ ಸಚಿವ ಶಿವರಾಜ್ ತಂಗಡಗಿಗೆ ಕಂಪ್ಲಿ ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಮಂಗಳವಾರ ಕಾರಟಗಿಯ ಸಚಿವರ ಕಾರ್ಯಾಲದಲ್ಲಿ ಮನವಿ ಸಲ್ಲಿಸಿದರು.

ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿ, ತುಂಗಭದ್ರಾ ನದಿ ಸೇತುವೆ ಆರೂವರೆ ದಶಕಗಳಷ್ಟು ಹಳೆಯದಾಗಿದ್ದು ನೂತನ ಸೇತುವೆ ನಿರ್ಮಿಸಬೇಕಿದೆ. ಇದಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ.

ಗಂಗಾವತಿ-ದರೋಜಿ ಬ್ರಾಡ್‌ಗೇಜ್ ರೈಲ್ವೆ

ಕಂಪ್ಲಿ ಮೂಲಕ ಗಂಗಾವತಿ-ದರೋಜಿ ಬ್ರಾಡ್‌ಗೇಜ್ ರೈಲ್ವೆ ಸಂಪರ್ಕಕ್ಕೆ ಸರ್ವೇ ಕಾರ್ಯ ನಡೆದಿದೆ. ಮುಂದಿನ ಪ್ರಗತಿಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಈ ದಿಸೆಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಜಿಲ್ಲಾ ಗಣಿ ಬಾಧಿತ ನಿದಿ ಅಥವಾ ಸರ್ಕಾರದ ವಿಶೇಷ ಅನುದಾನದಡಿ ನೂತನ ಸೇತುವೆ ಹಾಗೂ ರೈಲ್ವೆ ಸಂಪರ್ಕಕ್ಕಾಗಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net