

ಕಂಪ್ಲಿ: ಗಂಗಾವತಿ ರಸ್ತೆಯಲ್ಲಿ ವಿಜಯನಗರ (ಬೆನಕನ) ಕಾಲುವೆಗೆ ನಿರ್ಮಿಸಿರುವ ಸೇತುವೆ ಶಿಥಿಲಗೊಂಡಿರುವುದರಿಂದ ಅಧಿಕಾರಿಗಳು ಶುಕ್ರವಾರ ಪರಿಶೀಲಿಸಿದರು.
ದಿಶಾ ರಾಜ್ಯ ಸಮಿತಿ ಸದಸ್ಯ ಎ.ಸಿ.ದಾನಪ್ಪ ಮಾತನಾಡಿ, ವಿಜಯನಗರ ಕಾಲುವೆ ಸೇತುವೆಯ ಎರಡೂ ಬದಿಯ ರಕ್ಷಣಾ ಗೋಡೆಗಳು ಬಿದ್ದು ಹೋಗಿದ್ದು ವಾಹನಗಳ ಸಂಚಾರಕ್ಕೆ ಅಪಾಯಕಾರಿಯಾಗಿದೆ. ಸೇತುವೆ ಕುಸಿಯುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತು ಹೊಸ ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ನೀರಾವರಿ ನಿಗಮದ ಎಇಇ ಬಸಪ್ಪ ಜಾನಕರ್ ಮಾತನಾಡಿ, ಈ ಸೇತುವೆ ಲೋಕೋಪಯೋಗಿ ಇಲಾಖೆ ಸುಪರ್ದಿಗೊಳಪಟ್ಟಿದ್ದು, ಶಿಥಿಲಗೊಂಡಿರುವ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ಪಿಡಬ್ಲುೃಡಿ ಎಇ ಆನಂದ್ ಪೆಮ್ಮಾರ್ ಮಾತನಾಡಿ, ಸೇತುವೆ ಸದ್ಯ ಪೈಪ್ ಕಲ್ವರ್ಟ್ ಆಗಿದ್ದು, ಇದನ್ನು ಬಾಕ್ಸ್ ಕಲ್ವರ್ಟ್‌ನ್ನಾಗಿ ನಿರ್ಮಿಸಲಾಗುವುದು. ತುಂಗಭದ್ರಾ ನದಿಯಿಂದ ಹೊಸ ಬಸ್‌ಸ್ಟಾೃಂಡ್‌ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ಈ ಕಾಲುವೆಗೆ ಸೇತುವೆ ನಿರ್ಮಿಸಲಾಗುವುದು. ಸದ್ಯ ಸೇತುವೆ ನಿರ್ಮಾಣ ಕಾಮಗಾರಿ ಟೆಂಡರ್ ಹಂತದಲ್ಲಿದೆ ಎಂದರು.
ಪಿಡಬ್ಲುೃಡಿ ಜೆಇ ವೀರಭದ್ರಯ್ಯಸ್ವಾಮಿ, ನಂ.10ಮುದ್ದಾಪುರ ಗ್ರಾಪಂ ಸದಸ್ಯ ಎಸ್.ಚಂದ್ರಶೇಖರ್, ಕೋಟೆ ರೈತ ಸಂಘದ ಅಧ್ಯಕ್ಷ ಮಣ್ಣೂರು ನವೀನ್ ಇತರರಿದ್ದರು.