ಸೇತುವೆಯಿಂದ ಜಿಗಿದು ಆತ್ಮಹತ್ಯೆ

water death
Published on

ಬೆಳಗಾವಿ: ಸೇತುವೆ ಮೇಲಿಂದ ಜಿಗಿದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಣ್ಣೂರು ಗ್ರಾಮದ ಬಳಿ ಭಾನುವಾರ ನಡೆದಿದೆ. ಮಣ್ಣೂರು ಗ್ರಾಮದ ದ್ರೌಪದಾ ಪಾಂಡುರಂಗ ಚೌಗಲೆ(60)ಮೃತ ಮಹಿಳೆ.

ಮಹಿಳೆಯ ಪತಿ ಪಾಂಡುರಂಗ ಅವರಿಗೆ ಪಾರ್ಶ್ವವಾಯು ಹೊಡೆದು ಎರಡು ತಿಂಗಳ ಹಿಂದೆ ನಿಧನರಾಗಿದ್ದರಿಂದ, ದ್ರೌಪದಾ ಖಿನ್ನತೆಗೆ ಒಳಗಾಗಿದ್ದರು. ಭಾನುವಾರ ಬೆಳಗ್ಗೆ ಗೊಬ್ಬರ ಗ್ಯಾಸ್‌ಗೆ ದನಗಳ ಸಗಣಿ ತರಲು ಹೋಗಿದ್ದ ವೇಳೆ ಗ್ರಾಮದ ವ್ಯಾಪ್ತಿಯ ಮಾರ್ಕಂಡೇಯ ನದಿಗೆ ನಿರ್ಮಿಸಿದ್ದ ಸಣ್ಣ ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಮಹಿಳೆಯ ಪುತ್ರ ದೂರು ನೀಡಿದ್ದಾನೆ.

ಘಟನಾ ಸ್ಥಳಕ್ಕೆ ಆಗಮಿಸಿದ್ದ ಕಾಕತಿ ಠಾಣೆ ಪೊಲೀಸರು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net