ಕೃಷಿ ತೋಟ ಮುಳುಗಡೆ

store
ಪುಣ್ಚತ್ತಾರಿನಲ್ಲಿ ಹೆದ್ದಾರಿ ಸಂಚಾರ ಸ್ಥಗಿತವಾಗಿರುವುದು
Published on

ಕಡಬ: ಕಾಣಿಯೂರು ಗ್ರಾಮದ ಬಿರ್ನೆಲೆ ವಸಂತ ಎಂಬವರ ಮನೆ ಸಮೀಪದಲ್ಲಿ ದರೆ ಕುಸಿದು ಮನೆ ಅಪಾಯದ ಸ್ಥಿತಿಯಲ್ಲಿದೆ. ಪೈಕ ಎಂಬಲ್ಲಿ ವಿದ್ಯುತ್ ತಂತಿ ಮೇಲೆ ಮರವೊಂದು ಮುರಿದು ಬಿದ್ದಿದೆ. ಬೆಳಂದೂರು ಗ್ರಾಮದ ಕೋಂಕ್ಯ ಎಂಬಲ್ಲಿ ಕೃಷಿ ತೋಟದ ಪಕ್ಕದಲ್ಲಿ ತೋಡು ಉಕ್ಕಿ ಹರಿದು ಅಪಾರ ಪ್ರಮಾಣದಲ್ಲಿ ಕೃಷಿ ತೋಟ ಮುಳುಗಡೆಯಾಗಿದೆ.

ಚಾರ್ವಕ ಗ್ರಾಮದ ನಾಣಿಲ-ದೈಪಿಲ ರಸ್ತೆಯ ಕಾಪೆಜಾಲು ಎಂಬಲ್ಲಿ ಪಕ್ಕದ ಬೃಹತ್ ತೋಡಿನ ನೆರೆ ನೀರು ರಸ್ತೆಗೆ ಆವರಿಸಿದೆ. ಕುಮಾರಧಾರಾ ನದಿಯ ಹಾಗೂ ಗುಂಡ್ಯ ಹೊಳೆಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಕೊಯಿಲ ಗ್ರಾಮದ ಸಬಳೂರು - ಏಣಿತ್ತಡ್ಕ ರಸ್ತೆಯ ಸಮಾಜ ಮಂದಿರದ ಬಳಿ ಸೇತುವೆ ಮುಳುಗಡೆಯಾಗಿದೆ. ಇದೇ ರಸ್ತೆ ಎರ್ಮಡ್ಕ ಎಂಬಲ್ಲಿ ರಸ್ತೆಗೆ ಧರೆ ಕುಸಿದು ಸಂಚಾರಕ್ಕೆ ತೊಡಕಾಗಿದೆ. ದರೆ ಇನ್ನಷ್ಟು ಕುಸಿದರೆ ಪಕ್ಕದಲ್ಲಿರುವ ಬೃಹತ್ ಮರವೊಂದು ಧರೆಗುರುಳುವ ಅಪಾಯವಿದೆ. ಹೆದ್ದಾರಿ ಸೇರಿದಂತೆ ಗ್ರಾಮೀಣ ಭಾಗದ ರಸ್ತೆ, ಸೇತುವೆ ಮುಳುಗಡೆಯಿಂದ ಸಂಜೆ ವೇಳೆಗೆ ವಿದ್ಯಾರ್ಥಿಗಳು ಮನೆಗೆ ತೆರಳಲು ಹರಸಾಹಸಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net