ಯಡಮಾವಿನಹೊಳೆ ಸೇತುವೆ ಬಿರುಕು

bridge
Published on

ಕುಂದಾಪುರ: ಅರಾಟೆ ಸೇತುವೆ ಹಿಗ್ಗುಸಂಧು ಬಳಿ ಬಿರುಕು ಬಿಟ್ಟಿರುವ ಕಹಿ ಮಾಸುವ ಮುನ್ನಾ ಯಡಮಾವಿನಹೊಳೆ ಸೇತುವೆ ಎರಡೂ ಕಡೆ ಬಿರುಕು ಬಿಟ್ಟಿದೆ. ಆದರೆ ಈ ಎರಡೂ ಸೇತುವೆಯ ಪಕ್ಕದಲ್ಲಿರುವ ಹಳೇ ಸೇತುವೆ ಸುಸ್ಥಿತಿಯಲ್ಲಿದ್ದು, ಹೊಸದಾಗಿ ನಿರ್ಮಿಸಿದ ಸೇತುವೆಯನ್ನು ಅಣಕಿಸುವಂತಿದೆ. ಯಡಮಾವಿನಹೊಳೆ ಸೇತುವೆ ನಿರ್ಮಾಣವಾಗಿ ಐದೇ ವರ್ಷಕ್ಕೆ ಸೇತುವೆ ಬಿರುಕು ಬಿಟ್ಟಿದೆ. ಬೈಂದೂರು ಹಾಗೂ ಕುಂದಾಪುರ ಕಡೆಯಿಂದ ಸೇತುವೆ ಪ್ರವೇಶ ಎರಡೂ ಬದಿಯಲ್ಲಿ ಬಿರುಕು ಬಿಟ್ಟಿದ್ದು, ವಾಹನಗಳು ಸಂಚರಿಸುವಾಗ ಜೋರಾದ ಶಬ್ದ ಬರುತ್ತದೆ.

ಕುಂದಾಪುರದಿಂದ ಕಾರವಾರ ತನಕ ರಸ್ತೆ ವಿಸ್ತರಣೆಗೆ 6 ವರ್ಷದ ಹಿಂದೆ ಚಾಲನೆ ನೀಡಲಾಗಿತ್ತು. ಸಂಗಮ ಸಮೀಪ, ಹೇರಕುದ್ರು, ರಾಜಾಡಿ, ಅರಾಟೆ, ಯಡಮಾವಿನಹೊಳೆ, ಮುವತ್ತುಮುಡಿ, ಬಿಜೂರು, ಶಿರೂರು, ಮಾವಿನಗುಂಡಿ ಬಳಿ ಹಳೇ ಸೇತುವೆ ಪಕ್ಕದಲ್ಲಿ ಹೊಸ ಸೇತುವೆಗಳನ್ನು ನಿರ್ಮಿಸಲಾಗಿತ್ತು. ಈ ಸೇತುವೆಗಳ ಪೈಕಿ ಅತಿ ಉದ್ದದ ಅರಾಟೆ ಸೇತುವೆ ಸಂಚಾರಕ್ಕೆ ಮುಕ್ತವಾದ ನಂತರ ಪ್ರವೇಶ ಭಾಗದಲ್ಲಿ ಕುಸಿತ, ಬಿರುಕು ಬಿಟ್ಟಿತ್ತು.

ಕುಂದಾಪುರ ಬೈಂದೂರು ನಡುವಿನ ಯಡಮಾವಿನಹೊಳೆ ಸೇತುವೆ ಬಿರುಕು ಬಗ್ಗೆ ಈಗಷ್ಟೇ ಮಾಹಿತಿ ಸಿಕ್ಕಿದ್ದು, ತಕ್ಷಣ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ಮಾಡಿ ವರದಿ ನೀಡುವಂತೆ ಸೂಚಿಸುತ್ತೇನೆ. ಬಿರುಕಿಗೆ ಕಾರಣವೇನು ಎಂದು ತಿಳಿದು ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಲಾಗುತ್ತದೆ. ಎಲ್ಲೆಲ್ಲಿ ರಸ್ತೆ ವಿಭಜಕ ಒಡೆದಿದ್ದಾರೋ ಅವುಗಳ್ನು ಮುಚ್ಚಿ, ಇನ್ನು ಮುಂದೆ ಒಡೆಯುವುದರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.
ಶಿಶುಮೋಹನ್ ಯೋಜನಾ ನಿರ್ದೇಶಕರು, ಹೆದ್ದಾರಿ ಪ್ರಾಧಿಕಾರ ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net