ಪ್ರವಾಹಕ್ಕೆ ಕೊಚ್ಚಿಹೋದ ಸಂತಡ್ಕ ಸೇತುವೆ

IMG-20220802-WA0008
Published on

ಪುತ್ತೂರು: ಸುಳ್ಯ ತಾಲೂಕಿನ ಕೊಲ್ಲಮೊಗ್ರ ಸಮೀಪದ ಸಂತಡ್ಕ ಎಂಬಲ್ಲಿ ಸೇತುವೆ ಯೊಂದು ಕಳೆದ ರಾತ್ರಿ ಹೊಳೆ ಯಲ್ಲಿ ಬಾರಿ ಪ್ರವಾಹಕ್ಕೆ ಕೊಚ್ಚಿ ಹೋಗಿದೆ.


ಪ್ರವಾಹದ ನೀರಿನೊಂದಿಗೆ ಕಾಡಿನಿಂದ ಮರದ ದಿಮ್ಮಿ, ಕಸ ಕಡ್ಡಿಗಳು ಜೊತೆ ಯಾಗಿ ಹರಿದ ಪರಿಣಾಮ ಸೇತುವೆ ಮುರಿದು ಈ ಬಾಗದ ಸುಮಾರು 200 ಕ್ಕೂ ಹೆಚ್ಚು ಕುಂಟುಂಬ ಸಂಪರ್ಕ ಕಳೆದುಕೊಂಡಿದೆ. 2018 ರಲ್ಲಿ ಸುರಿದ ಭಾರಿ ಮಳೆಗೆ ಸೇತುವೆಗೆ ಹಾನಿಯಾಗಿತ್ತು. ಬಳಿಕ ತೇಪೆ ಹಚ್ಚಿ ಸರಿಪಡಿಸಲಾಗಿತ್ತು. ಅ. 1 ರಂದು ಭಾರಿ ಮಳೆಯ ಪ್ರವಾವದಿಂದ ಸ್ವಲ್ಪ ಹಾನಿಯಾಗಿತ್ತು. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆ ಬಂದರೆ ಸೇತುವೆ ಕೊಚ್ಚಿ ಹೋಗುವ ಸಾಧ್ಯತೆಯನ್ನು ಸ್ಥಳಿಯರು ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net