ವೃತ್ತಿಪರ ಶಿಕ್ಷಕರಿಂದ ಬ್ರಿಡ್ಜ್ ಕೋರ್ಸ್

download
Published on

ಧಾರವಾಡ: ತಾಲೂಕಿನ ಸಿಂಗನಹಳ್ಳಿಯ ಧಾರವಾಡ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಮಾ. ೧೫ರಿಂದ ಏ. ೧೦ರವರೆಗೆ ವೃತ್ತಿಪರ ಶಿಕ್ಷಕರಿಂದ ವಿಜ್ಞಾನ ಮತ್ತು ಗಣಿತ ವಿಷಯಗಳ ಬ್ರಿಡ್ಜ್ ಕೋರ್ಸ್ ತರಬೇತಿ ಆಯೋಜಿಸಲಾಗಿದೆ. ಸಿಬಿಎಸ್‌ಇ ಅಥವಾ ರಾಜ್ಯ ಪಠ್ಯಕ್ರಮದಲ್ಲಿ ೧೦ನೇ ತರಗತಿ ಓದುತ್ತಿರುವ ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೇರಬಯಸುವ ವಿದ್ಯಾರ್ಥಿಗಳಿಗೆ ವಸತಿ, ಊಟ ಸಹಿತ ಉಚಿತ ತರಬೇತಿ ನೀಡಲಾಗುವುದು ಎಂದು ಸಂಸ್ಥೆಯ ಚೇರ್ಮನ್ ಜಿ.ವಿ. ಕೊಂಗವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net