ಸೋಂಪುರ ಗ್ರಾಮದ ಸೇತುವೆ ಮುಳುಗಡೆ

TKE BHADRA DAMNINDA NADIGE NEERU HARISIRUVUDARINDA SOMPURA SETUVE MULUGADEYAGIRUVUDU (1)
ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿರುವುದರಿಂದ ಹಲಸೂರು ಗೇಟ್‌ನಿಂದ ಕರಕುಚ್ಚಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೋಂಪುರ ಸೇತುವೆ ಮುಳುಗಡೆಯಾಗಿರುವುದು.
Published on

ರೀಕೆರೆ: ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ನದಿಗೆ 60 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದ್ದು, ತಾಲೂಕಿನ ಹಲಸೂರು ಗೇಟ್‌ನಿಂದ ಸೋಂಪುರ ಗ್ರಾಮದ ಮೂಲಕ ಕರಕುಚ್ಚಿ ಇತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದೆ.

ಜಲಾಶಯದ ಒಳ ಮತ್ತು ಭದ್ರಾ ನದಿ ಮೂಲಕ ಹೊರ ಹರಿವಿನ ಪ್ರಮಾಣ 60 ಸಾವಿರ ಕ್ಯೂಸೆಕ್‌ನಷ್ಟು ಇರುವ ಪರಿಣಾಮ ಸೇತುವೆ ಮುಳುಗಡೆಯಾಗಿ ಜನ ಸಂಚಾರ ಸ್ಥಗಿತವಾಗಿದೆ. ಪ್ರವಾಹ ಭೀತಿ ಎದುರಿಸುತ್ತಿರುವ ಸೋಂಪುರ ಗ್ರಾಮಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ಸೋಂಪುರ ಗ್ರಾಮದ 250ಕ್ಕೂ ಹೆಚ್ಚು ನಿವಾಸಿಗಳನ್ನು ಬಾವಿಕೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಬಹುದು ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net