3.96 ಲಕ್ಷ ರೂ. ಮೌಲ್ಯದ ಬ್ರೀಡ್ಜ್​ ಕಂ ಬ್ಯಾರೇಜ್​ನ 33 ಗೇಟ್​ ಕಳ್ಳತನ

Crime Logo
Published on

ರಾಣೆಬೆನ್ನೂರ: ಬ್ರೀಡ್ಜ್​ ಕಂ ಬ್ಯಾರೇಜ್​ನ 3.96 ಲಕ್ಷ ರೂ. ಮೌಲ್ಯದ 33 ಗೇಟ್​ಗಳನ್ನು ಯಾರೋ ಕಳ್ಳತನ ಮಾಡಿದ ಘಟನೆ ತಾಲೂಕಿನ ನಿಟ್ಟೂರ ಗ್ರಾಮದ ಬಳಿ ಸೋಮವಾರ ರಾತ್ರಿ ನಡೆದಿದೆ.

ಗ್ರಾಮದ ಬಳಿಯಿರುವ ಬ್ಯಾರೇಜ್​ಗೆ 2015ರಲ್ಲಿ 60 ಗೇಟ್​ಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ ಮುಂಗಾರು ಬಂದಾಗ ಗೇಟ್​ ತೆಗೆದು ಇಡುವುದು ಮತ್ತು ಮುಂಗಾರು ಮುಗಿದ ಮೇಲೆ ನವೆಂಬರ್​ನಲ್ಲಿ ಗೇಟ್​ ಅಳವಡಿಸುವ ಕಾರ್ಯ ಮಾಡಲಾಗುತ್ತಿತ್ತು.

ಆದರಂತೆ ಕಳೆದ ಏಪ್ರೀಲ್​ ತಿಂಗಳಲ್ಲಿ ಗೇಟ್​ ತೆಗೆದು ಇಡಲಾಗಿತ್ತು. ಯಾರೋ ಕಳ್ಳರು ಅವುಗಳನ್ನು ದೋಚಿದ್ದಾರೆ ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್​ ಮಣಿಕಂಠ ನಾಯ್ಕ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net