ಹುಬ್ಬಳ್ಳಿ: ನಗರದ ಶ್ರೀಬಾಲಾಜಿ ಲಿಂಗಾಯತ ವಧು ವರರ ಮಾಹಿತಿ ಕೇಂದ್ರ ಹಾಗೂ ಬೆಳಗಾವಿಯ ಶ್ರೀ ಓಂಕಾರ ಲಿಂಗಾಯತ ವಧು ವರರ ಮಾಹಿತಿ ಕೇಂದ್ರದ ಆಶ್ರಯದಲ್ಲಿ ಬೆಂಗಳೂರಿನ ಆನಂದರಾವ್ ಸರ್ಕಲ್ ನಲ್ಲಿ ಆ. 31 ಹಾಗೂ ಸೆಪ್ಟೆಂಬರ್ 1ರಂದು ಎರಡು ದಿನಗಳವರೆಗೆ ವಧುವರರ ಮಾಹಿತಿಗಳ ಉಚಿತ ವಿನಿಮಯ ಮೇಳವನ್ನು ಏರ್ಪಡಿಸಲಾಗಿದೆ ಎಂದು ಬಾಲಾಜಿ ಕೇಂದ್ರದ ಹನುಮಂತಪ್ಪ ಎಚ್.ಎಸ್. ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮಾಜದ ಉತ್ತರ ಕರ್ನಾಟಕದ ವಿವಿಧ ಪದವೀಧರರು ಹಾಗೂ ಎಲ್ಲ ರೀತಿ ಸಾಫ್ಟ್‌ವೇರ್ ಇಂಜಿನಿಯರ್ಸ್ ವಧುವರರ ಸಂಪೂರ್ಣ ಮಾಹಿತಿಯನ್ನು ಪರಸ್ಪರ ವಿನಿಮಯಕ್ಕೆ ಅವಕಾಶ ಕೊಡಲಾಗುತ್ತದೆ. ಬೆಳಗ್ಗೆ 10.30ರಿಂದ ಸಂಜೆ 5ರ ವರೆಗೆ ಮೇಳ ನಡೆಯಲಿದೆ.
ಕಳೆದ 30 ವರ್ಷದಿಂದ ವಧುವರರ ಸಮಾವೇಶ ಆಯೋಜಿಸುತ್ತ ಬಂದಿರುವ ನಮ್ಮ ಸಂಸ್ಥೆಯು ಕೆಲಸದಲ್ಲಿರುವ ಜನರಿಗೆ ಅನುಕೂಲ ಮಾಡಿಕೊಡುತ್ತಿದೆ. ವಿಳಂಬವಾದ ಮದುವೆ, ಮರುಮದುವೆಯ ವಧು ವರರು ಸಹ ನೇರ ಭೇಟಿ ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎಂದರು.