

ಮೂಲ್ಕಿ: 1958ರಲ್ಲಿ ಅಸ್ತಿತ್ವಕ್ಕೆ ಬಂದ ಮುಂಡಾಳ ಶಿವ ಸವಾಜ ಸೇವಾ ಸಂಘವು ಸಮುದಾಯದ ಹೆಣ್ಣುಮಕ್ಕಳ ಮದುವೆಗಾಗಿ ವಧು- ವರರ ಅನ್ವೇಷಣಾ ಕಾರ್ಯ ಹಮ್ಮಿಕೊಂಡಿರುವುದು ವಾತ್ರವಲ್ಲದೆ ಈ ಬಗ್ಗೆ ನೋಂದಣಿ ಮತ್ತು ವಾಹಿತಿಗಾಗಿ ಪ್ರತಿ ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂಘದ ಕಚೇರಿ ತೆರೆದಿರುತ್ತದೆ ಎಂದು ಒಂಬತ್ತು ವಾಗಣೆ ಮುಂಡಾಳ ಶಿವ ಸವಾಜ ಸೇವಾ ಸಂದ ಅಧ್ಯಕ್ಷ ಕೆ.ಸಚ್ಚಿದಾನಂದ ಹೇಳಿದರು.
ಮೂಲ್ಕಿ ಕಾರ್ನಾಡು ಗೇರುಕಟ್ಟೆ ಒಂಬತ್ತು ವಾಗಣೆ ಮುಂಡಾಳ ಶಿವ ಸವಾಜ ಸೇವಾ ಸಂ ವತಿಯಿಂದ ಸಂದ ಸಭಾಭವನದಲ್ಲಿ ಮುಂಡಾಳ ಸಮುದಾಯ(ಪರಿಶಿಷ್ಟ ಜಾತಿ) ವಧು- ವರರ ಅನ್ವೇಷಣಾ ಕಾರ್ಯಕ್ರಮವನ್ನು ದೈವಸ್ಥಾನಗಳ ಗುರಿಕಾರರೊಂದಿಗೆ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿಯ 2024ರ ಮಹಾತ್ಮ ಜ್ಯೋತಿ ಭಾಪುಲೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಸಂಘದ ಉಪಾಧ್ಯಕ್ಷ ರವೀಂದ್ರ ಕೆರೆಕಾಡು ಅವರನ್ನು ಸನ್ಮಾನಿಸಲಾಯಿತು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮುಂತಾದ ಕಡೆಗಳಿಂದ ಬಂದ ಸಮುದಾಯದ 50 ಆಸಕ್ತ ವಧು- ವರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಂದ ಸದಸ್ಯರಾದ ಸುಕುವಾರ್.ಬಿ.ಗೇರುಕಟ್ಟೆ, ಶೈನ ಸದಾಶಿವ ನಗರ, ಕೃಷ್ಣ ಕುಂದರ್ ಸದಾಶಿವ ನಗರ, ಸಂಜೀವ ಅಮೃತಾಮಯಿ ನಗರ, ಕೆ.ನಿತ್ಯಾನಂದ ಗೇರುಕಟ್ಟೆ, ಜಗನ್ನಾಥ ಅಮೃತಾಮಯಿ ನಗರ, ಕೃಷ್ಣ ಸಾಲಿಯಾನ್, ಭಾಸ್ಕರ್,ತ್ರೀತಲತ, ಸುರೇಶ್, ಗೋಪಾಲ, ತಿಲಕ್, ಸಂತೋಷ್ ಅಲಂಗಾರು ಉಪಸ್ಥಿತರಿದ್ದರು. ರಮೇಶ್ ಅಮೃತಾಮಯಿ ನಗರ ಸ್ವಾಗತಿಸಿದರು. ದಿವ್ಯರಾಜ್ ಕೊಯ್ಯಾರು ನಿರೂಪಿಸಿದರು. ರವೀಂದ್ರ ಕೆರೆಕಾಡು ವಂದಿಸಿದರು.