ಹಾರ ಹಾಕುವಾಗ ಕೈತಾಗಿದ್ದಕ್ಕೆ ಮದುವೆ ತಿರಸ್ಕರಿಸಿದ ವಧು!

Marriage
Published on

ಬೆಳ್ತಂಗಡಿ (ದ.ಕ.): ವಧುವಿಗೆ ಹಾರ ಹಾಕುವಾಗ ವರ ಕೈ ತಾಗಿಸಿದ್ದನ್ನೇ ನೆಪ ಮಾಡಿಕೊಂಡು ಜಗಳ ಶುರು ಮಾಡಿದ ವಧು ಹಾರವನ್ನೇ ಕಿತ್ತೆಸೆದು ಮದುವೆ ನಿರಾಕರಿಸಿದ ಘಟನೆ ನಾರಾವಿಯಲ್ಲಿ ಶುಕ್ರವಾರ ನಡೆದಿದೆ.

ವಿವಾಹ ಮಂಟಪದಲ್ಲಿ ಪರಸ್ಪರ ಹಾರ ಬದಲಾಯಿಸುವಾಗ ವಧುವಿನ ಕೊರಳು ಮತ್ತು ಕಿವಿಗೆ ವರನ ಕೈ ತಾಗಿದ್ದನ್ನೇ ನೆಪ ಮಾಡಿಕೊಂಡು ವಧು ಸಿಟ್ಟಾದಳು. ಹಿರಿಯರ ಮಾತುಕತೆ ಬಳಿಕ ಕಾರ್ಯಕ್ರಮ ಮುಂದುವರಿಸಿದರೂ ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮತ್ತೆ ಸಿಟ್ಟಿಗೆದ್ದ ವಧು ತಾಳಿಯ ಸಹಿತ ಹೂವಿನ ಹಾರವನ್ನು ಎಸೆದು ಈ ಮದುವೆಯೇ ಬೇಡ ಎಂದಳು.

ಘಟನೆ ಬೆನ್ನಲ್ಲೇ ಎರಡು ಕುಟುಂಬಗಳ ನಡುವೆಯೂ ಸಣ್ಣಮಟ್ಟಿನ ಜಗಳ ಏರ್ಪಟ್ಟಿದೆ. ಸ್ಥಳಕ್ಕಾಗಮಿಸಿದ ವೇಣೂರು ಪೊಲೀಸರ ಸಮ್ಮುಖ ಮಾತುಕತೆ ನಡೆದರೂ, ಪ್ರಯೋಜನವಾಗದೆ ಮದುವೆ ನಡೆಯಲಿಲ್ಲ. ನಿಶ್ಚಿತಾರ್ಥ ಸಂದರ್ಭ ಬಂದಿದ್ದ ವರನೇ ಬೇರೆ, ಹೆಣ್ಣು ನೋಡಲು ಬಂದವನೇ ಬೇರೆ, ಈಗ ಮದುವೆಯಾಗುತ್ತಿರುವವನೇ ಬೇರೆ. ಇದು ಮದುವೆ ತಿರಸ್ಕರಿಸಲು ಮುಖ್ಯ ಕಾರಣ ಎಂದು ಆರೋಪಿಸುವ ಮೂಲಕ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net