VIDEO| ಬುಲೆಟ್​ ಏರಿ ಮದುವೆ ಮಂಟಪಕ್ಕೆ ಅದ್ದೂರಿ ಎಂಟ್ರಿ ಕೊಟ್ಟ ವಧು..!​

Bullet Rani
Published on

ಮಂಗಳೂರು: ಮಂಗಳೂರಿನಲ್ಲಿ ಹಸೆಮಣೆಗೆ ಏರಲು ಮಧುಮಗಳೊಬ್ಬಳು ಬುಲೆಟ್ ನಲ್ಲಿ ಮದುವೆ ಮಂಟಪಕ್ಕೆ ಎಂಟ್ರಿಯಾಗುವ ಮೂಲಕ ಮದುವೆಗೆ ಬಂದಿದ್ದವರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.

ಮಂಗಳೂರಿನ ಸುರತ್ಕಲ್ ಮೂಲದ ಪೂಜಾ ಎಂಬ ವಧು ಬುಲೆಟ್ ಮೂಲಕ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಸುರತ್ಕಲ್​ನ ಪೂಜಾ ಹಾಗೂ ಆಕಾಶ್ ಮದುವೆ ನವೆಂಬರ್ ನಾಲ್ಕರಂದು ನಡೆದಿತ್ತು. ಬುಲೆಟ್ ಪ್ರೇಮಿಯಾಗಿರುವ ಪೂಜಾ ಸಿಂಗಾರಗೊಂಡಿದ್ದ ಕಾರನ್ನು ಹತ್ತಿ ಬರುವ ಬದಲು ತನ್ನ ಸ್ವಂತ ಬುಲೆಟ್ ಓಡಿಸಿಕೊಂಡು ಮದುವೆ ಮಂಟಪಕ್ಕೆ ಎಂಟ್ರಿಯಾಗಿದ್ದಳು.

ಕಾಸರಗೋಡು ಮೂಲದ ಮ್ಯಾಚ್ ಫ್ರೇಮ್ ವೆಡ್ಡಿಂಗ್ ಸಂಸ್ಥೆಯ ಕ್ಯಾಮರಮೆನ್ಸ್ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಬುಲೆಟ್ ರಾಣಿಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net