

ಹುಬ್ಬಳ್ಳಿ : ಇಲ್ಲಿನ ಶ್ರೀ ಗುರು ವಧá--ವರರ ಮಾಹಿತಿ ಕೇಂದ್ರದ ವತಿಯಿಂದ ಆ.17 ರಂದು ಬೆಳಗ್ಗೆ 10 ಗಂಟೆಗೆ ಚನ್ನಮ್ಮ ವೃತ್ತ ಬಳಿಯ ಕೆಸಿಸಿ ಬ್ಯಾಂಕ್ ಸಭಾಂಗಣದಲ್ಲಿ ರಾಜ್ಯ ಮಟ್ಟದ ವೀರಶೈವ ಲಿಂಗಾಯತ ಮತ್ತು ಎಲ್ಲ ಒಳಪಂಗಡಗಳ ವಧು-ವರರ ಹಾಗೂ ಪಾಲಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಡಿ.ಬಿ. ದುಂಡಪ್ಪನವರ, ಜಂಗಮ, ಬಣಜಿಗ, ಪಂಚಮಸಾಲಿ, ಬಣಗಾರ, ಶಿವಶಿಂಪಿ, ನೇಕಾರ, ಕುರುವಿನಶೆಟ್ಟಿ, ಸಾಧರ, ಗಾಣಿಗೇರ, ಲಿಂಗಾಯತ ರೆಡ್ಡಿ, ಪಾಕಮಕ ರೆಡ್ಡಿ ಸೇರಿ ಎಲ್ಲ ಒಳ ಪಂಗಡಗಳ ಎಂಬಿಬಿಎಸ್, ಬಿಡಿಎಸ್, ಬಿಎಚ್ಎಂಎಸ್, ಬಿಇ, ಎಂ.ಟೆಕ್, ಎಂಬಿಎ, ಡಿಪ್ಲೊಮಾ, ಪದವೀಧರರು, ಸರ್ಕಾರಿ ನೌಕರರು, ಅರೇ ಸರ್ಕಾರಿ ನೌಕರರು, ವ್ಯಾಪಾರಸ್ಥರು, ಉದ್ಯಮಿಗಳು ಭಾಗವಹಿಸುವರು ಎಂದರು.
ಅಂದು ಮಧ್ಯಾಹ್ನ 12 ರಿಂದ 2 ಗಂಟೆವರೆಗೆ ಎರಡನೇ ಸಂಬಂಧಕ್ಕಾಗಿ ವಿಧುರ, ವಿಧವೆ ಹಾಗೂ ವಿಚ್ಛೇದಿತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.