ವಧು-ವರರ ಪರಿಚಯದ ಸಮಾವೇಶ 22ಕ್ಕೆ

New Press meet 1 New
Published on

ಹುಬ್ಬಳ್ಳಿ : ರಾಜ್ಯಮಟ್ಟದ ವೀರಶೈವ ಲಿಂಗಾಯತ ಮತ್ತು ಎಲ್ಲ ಒಳಪಂಗಡಗಳ ವಧು-ವರರ ಹಾಗೂ ಪಾಲಕರ ಪರಸ್ಪರ ಪರಿಚಯದ ಬೃಹತ್ ಸಮಾವೇಶವನ್ನು ಜೂ. 22ರಂದು ಬೆಳಗ್ಗೆ 10 ಗಂಟೆಗೆ ನಗರದ ಚನ್ನಮ್ಮ ವೃತ್ತದ ಬಳಿಯ ಕೆಸಿಸಿ ಬ್ಯಾಂಕ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ನಗರದ ಶ್ರೀ ಗುರು ಮ್ಯಾಟಮೋನಿ ಇನ್​ಫಾಮೇರ್ಶನ್​ ಸೆಂಟರ್​ನ ವ್ಯವಸ್ಥಾಪಕ ನಿರ್ದೇಶಕ ಡಿ. ಬಿ. ದುಂಡಪ್ಪನವರ ಅವರು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಜಂಗಮ, ಬಣಜಿಗ, ಪಂಚಮಸಾಲಿ, ಬಣಜಗಾರ, ಶಿವಶಿಂಪಿ, ನೇಕಾರ, ಕುರುವಿನಶೆಟ್ಟಿ, ಸಾಧರು, ಗಾಣಿಗೇರ, ಲಿಂಗಾಯತರೆಡ್ಡಿ, ಪಾಕನಕರೆಡ್ಡಿ, ಕುಡುವಕ್ಕಲಿಗ ಹಾಗೂ ಇತರ ಎಲ್ಲ ಒಳಪಂಗಡದವರು ಭಾಗವಹಿಸಬಹುದು ಎಂದು ಹೇಳಿದರು.

ಅದೇ ದಿನ ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ 2ನೇ ಸಂಬಂಧಕ್ಕಾಗಿ ವಿದೂರ, ವಿಧವೆ ಹಾಗೂ ವಿಚ್ಛೇದಿತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net