ಉಪ್ಪಾರ ಸಮಾಜದ ವಧು ವರರ ಸಮಾವೇಶ 14 ರಂದು

uppar mahasabha
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಉಪ್ಪಾರ ಸಮಾಜದ ರಾಷ್ಟ್ರ ಮಟ್ಟದ ವಧು ವರರ ಸಮಾವೇಶ ಜುಲೈ 14ರಂದು ಹುಬ್ಬಳ್ಳಿ ಸವಾಯಿ ಗಂಧರ್ವ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ಅಧ್ಯಕ್ಷ ವಿಷ್ಣು ಲಾತೂರ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ವಾಸಿಸುತ್ತಿರುವ ಸಮಾಜದ ವಧು, ವರರು ಹಾಗೂ ಪಾಲಕರು ಭಾಗವಹಿಸುವರು. ಈಗಾಗಲೇ 200ಕ್ಕೂ ಹೆಚ್ಚು ಜನ ನೋಂದಣಿ ಮಾಡಿಸಿದ್ದು, ಸಮಾವೇಶದ ದಿನದಂದು ಸಹ ಸ್ಥಳದಲ್ಲಿಯೇ ಹೆಸರು ನೋಂದಾಯಿಸಲು ಅವಕಾಶವಿದೆ. ಹಾಗಾಗಿ 1 ಸಾವಿರ ಮೇಲ್ಪಟ್ಟು ವಧು, ವರರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಅಂದು ಬೆಳಗ್ಗೆ 10 ಗಂಟೆಗೆ ಉಪ್ಪಾರ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಶ್ರೀ ರಾಮುಲು ಸಗರ್ ಉದ್ಘಾಟಿಸುವರು. ಸಮಾಜದ ಮುಖಂಡರು, ವಿವಿಧ ಮಠಾಧೀಶರು ಪಾಲ್ಗೊಳ್ಳುವರು. ಸರ್ಕಾರಿ- ಖಾಸಗಿ ನೌಕರರು, ವ್ಯಾಪಾರಿಗಳು, ಸ್ವ ಉದ್ಯೋಗ ನಡೆಸುವ ಸಮಾಜದ ಯುವಕ-ಯುವತಿಯರು ಸಮಾವೇಶದ ಪ್ರಯೋಜನ ಪಡೆಯಬಹುದಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿ.ಯಲ್ಲಿ ಮಾರುತಿ ಮಳವಂಕಿ, ನಾಗರಾಜ ಪೂಜಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net