ಲಂಚ ವ್ಯವಹಾರ ಅಕ್ಷಮ್ಯ ಅಪರಾಧ

karyagara
ಹೆಬ್ರಿ ಸರ್ಕಾರಿ ಕಾಲೇಜಿನಲ್ಲಿ ನಡೆದ ಲೋಕಾಯುಕ್ತ ಕಾಯ್ದೆ, ಸೈಬರ್ ಅಪರಾಧ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಕಾರ್ಯಾಗಾರವನ್ನು ಜಿಲ್ಲಾ ಲೋಕಾಯುಕ್ತ ಪ್ರಭಾರ ಪೊಲೀಸ್ ಅಧೀಕ್ಷಕ ಮಂಜುನಾಥ ಶಂಕ್ರಳ್ಳಿ ಉದ್ಘಾಟಿಸಿದರು.
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಮನೆಯಿಂದಲೇ ಭ್ರಷ್ಟಾಚಾರ ಶುರುವಾಗುತ್ತದೆ. ಮನೆಯವರ ಆಸೆಗಳ ಈಡೇರಿಸಲು ಅಡ್ಡದಾರಿ ಹಿಡಿಯುವ ದುಸ್ಸಾಹಸಕ್ಕೆ ಮಕ್ಕಳು ಮುಂದಾಗುತ್ತಿದ್ದಾರೆ. ಲಂಚ ನೀಡುವುದು, ಪಡೆಯುವುದು ಅಕ್ಷಮ್ಯ ಅಪರಾಧ ಎಂದು ಉಡುಪಿ ಜಿಲ್ಲಾ ಲೋಕಾಯುಕ್ತ ಪ್ರಭಾರ ಪೊಲೀಸ್ ಅಧೀಕ್ಷಕ ಮಂಜುನಾಥ ಶಂಕ್ರಳ್ಳಿ ಹೇಳಿದರು.

ಶಾಂತಿನಿಕೇತನ ಯುವವೃಂದ ಕುಡಿಬೈಲ್ ಕುಚ್ಚೂರು, ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಹೆಬ್ರಿ, ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಡುಪಿ ಜಿಲ್ಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಭಾಗಿತ್ವದಲ್ಲಿ ಲೋಕಾಯುಕ್ತ ಕಾಯ್ದೆ, ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಸೈಬರ್ ಅಪರಾಧದ ಬಗ್ಗೆ ಶನಿವಾರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರಾಂಶುಪಾಲ ಡಾ.ವಿದ್ಯಾದರ ಹೆಗ್ಡೆ ಅಧ್ಯಕ್ಷತೆ ವಹಿಸಿ, ನಾವೆಲ್ಲರೂ ಅತಿಯಾದ ಆಸೆಯಿಂದ ಮೋಸಕ್ಕೆ ಹೋಗುತ್ತಿದ್ದೇವೆ. ಯುವಕ ಯುವತಿಯರು ಸೈಬರ್ ಕ್ರೈಮ್‌ಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಗೌಪ್ಯತೆ ಕಾಪಾಡಿಕೊಳ್ಳಿ ಎಂದರು.

ಶಾಂತಿನಿಕೇತನ ಸಂಸ್ಥೆ ಅಧ್ಯಕ್ಷ ಮಹೇಶ್ ನಾಯ್ಕ, ಪತ್ರಕರ್ತ ನರೇಂದ್ರ ಎಸ್.ಮರಸಣಿಗೆ ಇದ್ದರು. ಡಾ.ಗಣೇಶ್ ಎಸ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಪ್ರವೀಣ್ ಕುಮಾರ್ ಎಸ್. ವಂದಿಸಿದರು. ಅಕ್ಷತಾ ನಿರೂಪಿಸಿದರು.

ಇಂದಿನ ಮಕ್ಕಳು ಸಾಮಾಜಿಕ ಜಾಲತಾಣದ ವ್ಯಸನಿಗಳಾಗಿದ್ದಾರೆ. ನಕಲಿ ಖಾತೆಗಳ ಮೂಲಕ ಸಮಸ್ಯೆ ಸೃಷ್ಟಿಸುವುದು, ಧರ್ಮ, ಸುಳ್ಳು ಸುದ್ದಿ ಹರಡುವುದು, ಅಶ್ಲೀಲ ಸಂದೇಶಗಳನ್ನು ಕಳುಹಿಸಿದರೆ ಜಾಮೀನು ರಹಿತ ಶಿಕ್ಷೆಯಾಗುತ್ತದೆ. ಪ್ರತಿಯೊಬ್ಬರಿಗೂ ಸಂವಿಧಾನ ಖಾಸಗಿತನ ಹಕ್ಕು ನೀಡಿದೆ. ಮಂಜುನಾಥ್ ಶಂಕ್ರಳ್ಳಿ, ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ https://www.vijayavani.net/sports-contribute-to-building-a-healthy-society https://www.vijayavani.net/exploring-new-frontiers-in-technology

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net