ಲಂಚ ಪಡೆಯುವುದು ನೀಡುವುದೂ ಅಪರಾಧ

Bribery Elimination Awareness, Crime, Golasangi, Muttagi, Takkalakki, Power Greed,
ಗೊಳಸಂಗಿ ಸಮೀಪದ ಟಕ್ಕಳಕಿ ಗ್ರಾಮದಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಜಾಗೃತಿ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಕೃಷ್ಣಾ ಕುರಾಡಿಕರ, ರೇಣುಕಾ ಭಜಂತ್ರಿ ಕವಿತಾ ಬಡಿಗೇರ, ಕನಕಪ್ಪ ಬಂಡಿವಡ್ಡರ ಇತರರಿದ್ದರು.
Published on

ಗೊಳಸಂಗಿ: ಲಂಚ ಪಡೆಯುವವರಷ್ಟೇ ಅಪರಾಧಿಗಳಲ್ಲ, ಲಂಚವನ್ನು ನೀಡುವವರೂ ಕೂಡ ಅಪರಾಧಿಗಳಾಗುತ್ತಾರೆ ಎಂದು ಮುತ್ತಗಿ ಗ್ರಾಪಂ ಮಾಜಿ ಉಪಾಧ್ಯಕ್ಷ ಕನಕಪ್ಪ ಬಂಡಿವಡ್ಡರ ಹೇಳಿದರು.

ಸಮೀಪದ ಮುತ್ತಗಿ ಗ್ರಾಪಂ ವ್ಯಾಪ್ತಿಯ ಟಕ್ಕಳಕಿ ಗ್ರಾಮದ ವೆಂಕಟೇಶ್ವರ ದೇವಸ್ಥಾನದಲ್ಲಿ ಕೂಡಗಿಯ ಪವರ್ ಗ್ರೀಡ್ ಕಾರ್ಪೋರೇಷನ್ ಆ್ ಇಂಡಿಯಾ ಲಿ. ಕಂಪನಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ನಿರ್ಮೂಲನಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪವರ್ ಗ್ರೀಡ್ ಕಂಪನಿಯ ಡಿಜಿಎಂ ಕೋಟಾ ನಾಗೇಶ್ವರ ಮಾತನಾಡಿ, ಭ್ರಷ್ಟಾಚಾರ ನಿಯಂತ್ರಣ ಕಾರ್ಯ ಬೇರುಮಟ್ಟದಲ್ಲಿ ಆರಂಭಗೊಳ್ಳಬೇಕು. ಅದು ಗ್ರಾಮಮಟ್ಟದಲ್ಲೇ ಚಾಲನೆ ಪಡೆಯಬೇಕು ಎಂದರು.

ವೆಂಕಟೇಶ್ವರ ದೇವಾಲಯ ಕಮಿಟಿ ಅಧ್ಯಕ್ಷ ಕೃಷ್ಣಾ ಕುರಾಡಿಕರ, ಗ್ರಾಪಂ ಕಾರ್ಯದರ್ಶಿ ರೇಣುಕಾ ಭಜಂತ್ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಕವಿತಾ ಬಡಿಗೇರ, ಸದಸ್ಯರಾದ ಗೀತಾ ಪೂಜಾರಿ, ಗುರುಲಿಂಗ ಬಂದಿ, ಬಾಬಾಸಾಹೇಬ ಯರನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net