ಸೋಲಿಗರ ಪಹಣಿ ಪತ್ರ ರದ್ದತಿಗೆ ಖಂಡನೆ

Oplus_0
Oplus_0
Published on

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ, ಸೀಗೆಬೆಟ್ಟ ಹಾಗೂ ಬಂಗ್ಲೆಪೋಡಿನ 25 ಕುಟುಂಬಗಳು ವ್ಯವಸಾಯ ಮಾಡಿಕೊಂಡು ಬರುತ್ತಿದ್ದರೂ ಏಕಾಏಕಿ ಉಪ ವಿಭಾಗಾಧಿಕಾರಿಗಳ ಕಚೇರಿಯಿಂದ ಪಹಣಿ ರದ್ದಾಗಿದೆ ಎಂದು ಬಂದಿರುವ ಆದೇಶ ಖಂಡಿಸಿ ಬುಧವಾರ ತಾಲೂಕು ಸೋಲಿಗ ಅಭಿವೃದ್ಧಿ ಸಂಘದವರು ಧರಣಿ ಆರಂಭಿಸಿದರು.
ಬಿಳಿಗಿರಿರಂಗನಬೆಟ್ಟದ ಗ್ರಾಪಂ ಕಚೇರಿ ಮುಂಭಾಗ ಮಳೆ, ಗಾಳಿಯ ನಡುವೆಯೂ ಅನಿರ್ದಿಷ್ಟಾವಧಿ ಧರಣಿಗೆ ಚಾಲನೆ ದೊರಕಿದ್ದು, ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನ್ಯಾಯ ದೊರಕಿಸಿಕೊಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಯರಕನಗದ್ದೆ, ಸೀಗೆಬೆಟ್ಟ ಹಾಗೂ ಬಂಗ್ಲೆಪೋಡಿನ 97 ಜನರಿಗೆ ಜಮೀನನ್ನು 1963 ರಲ್ಲಿ ನೀಡಲಾಗಿತ್ತು. ಆದರೆ ಇದರಲ್ಲಿ ಕೆಲವರಿಗೆ ಹಕ್ಕುಪತ್ರ ಮತ್ತು ಮಂಜೂರಾತಿ ಪತ್ರ ನೀಡಿಲ್ಲ. ಇದರ ನೆಪವೊಡ್ಡಿ ಪಹಣಿ ರದ್ದು ಮಾಡಿರುವ ಉಪವಿಭಾಗಾಧಿಕಾರಿಗಳ ಕಚೇರಿ ಆದೇಶ ಖಂಡನೀಯ ಎಂದು ಪ್ರತಿಭಟನಾಕಾರರು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net