

ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಉಸಿರಾಟದ ತೊಂದರೆಯಿಂದ ಮೀನುಗಾರನೋರ್ವ ಮಂಗಳವಾರ ಮೃತಪಟ್ಟಿದ್ದಾರೆ. ಗಂಗೊಳ್ಳಿ ಗ್ರಾಮದ ಹರಿಕೃಷ್ಣ (65) ಎಂಬುವರು ಭಾನುವಾರ ಮತ್ಸೃಜ್ಯೋತಿ ಗಿಲ್‌ನೆಟ್ ದೋಣಿಯಲ್ಲಿ ಸಂಗಡಿಗರವರೊಂದಿಗೆ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದು, ಮಂಗಳವಾರ ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡಿಕೊಂಡಿರುವಾಗ ಮಧ್ಯಾಹ್ನ ಉಸಿರಾಡಲು ಕಷ್ಟವಾಗಿ ಮೇಲ್ ಉಸಿರು ಬಿಡುತ್ತಿದ್ದವರನ್ನು ದೋಣಿಯಲ್ಲಿದ್ದ ಸಂಗಡಿಗರು ದಡಕ್ಕೆ ಕರೆದುಕೊಂಡು ಬಂದು ಅವರನ್ನು ಚಿಕಿತ್ಸೆಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅದಾಗಲೇ ಹರಿಕೃಷ್ಣ ಮೃತಪಟ್ಟಿದ್ದರು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.