

ಮಂಗಳೂರು: ಮಗು ಜನಿಸಿದ ಮೊದಲ ಗಂಟೆಯೊಳಗೆ ತಾಯಿಯ ಎದೆಹಾಲು ನೀಡುವುದು ಅವಶ್ಯಕ. ಮಗುವಿಗೆ 6 ತಿಂಗಳ ತನಕ ತಾಯಿಯ ಎದೆಹಾಲು ಮಾತ್ರ ನೀಡಬೇಕು ಮತ್ತು ಈ ಅವಧಿಯಲ್ಲಿ ಬೇರೆ ಆಹಾರ ಅಥವಾ ಪಾನೀಯ ನೀಡಬಾರದು ಎಂದು ಅದಾನಿ ಸಂಸ್ಥೆಯ ಸುಪೋಷನ್ ಅಧಿಕಾರಿ ಡಾ.ಪ್ರೇಮ ಡಿಸೋಜ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಮಂಗಳೂರು, ಅದಾನಿ ಫೌಂಡೇಶನ್ ಸುಪೋಷನ್ ಯೋಜನೆ, ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರ, ಮೂಲ್ಕಿ ನಗರ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಕಾರ್ನಾಡ್ ಅಮೃತಮಯಿ ನಗರ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ನಡೆದ ‘ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ಅದಾನಿ ಸಂಸ್ಥೆಯ ಸಹಾಯಕ ಸುಪೋಷನ್ ಅಧಿಕಾರಿ ಚೈತ್ರ, ಲವ್ಲಿ ರೋಶನಿ ಡಿಸೋಜ, ಸುಪೋಷನ್ ಸಂಗಿನಿ ಮಲ್ಲಿಕಾ, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಆರೋಗ್ಯ ನಿರೀಕ್ಷಕಿ ರಕ್ಷಿತಾ, ಆರೋಗ್ಯ ಸುರಕ್ಷಾಧಿಕಾರಿ ಮಾರ್ಗರೆಟ್, ಶಿಶು ಅಭಿವೃದ್ದಿ ಇಲಾಖೆಯ ಹಿರಿಯ ಮೇಲ್ವಿಚಾರಕಿ ಭಾರತಿ, ಅಂಬೇಡ್ಕರ್ ಭವನದ ಭೀಮರಾವ್ ವೇದಿಕೆಯ ಉಪಾಧ್ಯಕ್ಷ ಸಂಜೀವ, ಸಮುದಾಯ ಆರೋಗ್ಯ ಕೇಂದ್ರದ ಸಮಿತಿ ಸದಸ್ಯ ರಮೇಶ್ ,ಆರೋಗ್ಯ ಇಲಾಖೆಯ ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.