ಮಗುವಿಗೆ ಹಾಲುಣಿಸುತ್ತಿದ್ದ ಪತ್ನಿಯ ಎದೆಭಾಗಕ್ಕೆ ಬ್ಲೇಡ್ ಹಾಕಿದ ಪತಿ! ಕಾರಣ ಕೇಳಿದ್ರೆ ಸಿಟ್ಟಿಗೇಳ್ತೀರಿ

milk
Published on

ಹುಬ್ಬಳ್ಳಿ: ಅದೆಂಥ ಕ್ರೂರಿಗಳು ಇರ್ತಾರೆ ನೋಡಿ. ತನ್ನ ಮಗುವಿಗೆ ಎದೆಹಾಲುಣಿಸುತ್ತ ಕುಳಿತ್ತಿದ್ದ ಪತ್ನಿ ಮೇಲೆ ಹಲ್ಲೆ ಮಾಡಿದ ಪತಿ, ಆಕೆಯ ಎದೆಭಾಗವನ್ನ ಬ್ಲೇಡ್​ನಿಂದ ಕೊಯ್ದಿದ್ದಾನೆ!

ಇಂತಹ ಅಮಾನವೀಯ ಘಟನೆ ಹುಬ್ಬಳ್ಳಿಯ ಸೆಟ್ಲಮೆಂಟ್​ನ ಗಂಗಾಧರ್ ನಗರದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಸುನಿಲ್​ ಪತ್ನಿ ರಂಜಿತಾಳನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿರಿ ರೌಡಿ ಮಗ ಮತ್ತೊಬ್ಬ ರೌಡಿನೇ ಆಗ್ಬೇಕಾ? ಪೊಲೀಸ್​ ಕಚೇರಿಯಲ್ಲೇ ಬೆಂಕಿ ಹಚ್ಚಿಕೊಂಡು ಸಾಯ್ತೀವಿ…

ಸುನೀಲ್​ ಮತ್ತು ರಂಜಿತಾ ನಡುವೆ ಕೌಟುಂಬಿಕ ಮನಸ್ತಾಪ ಇತ್ತು. ನಿತ್ಯ ಜಗಳವಾಡುತ್ತಿದ್ದರು ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆ ಪತ್ನಿಯ ಜತೆವಾಡಿದ್ದ. ಇದೇ ವೇಳೆ ಮನೆಯಲ್ಲಿ ತನ್ನ ಮಗುವಿಗೆ ಪತ್ನಿ ಹಾಲು ಕುಡಿಸುತ್ತಾ ಕುಳಿತ್ತಿದ್ದಳು. ಆಗ ಸುನೀಲ್​, ಪತ್ನಿಯ ಎದೆ ಭಾಗಕ್ಕೆ ಬ್ಲೇಡ್​ನಿಂದ ಕೊಯ್ದಿದ್ದಾನೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net