ಮಗುವಿನ ಬೆಳವಣಿಗೆಗೆ ತಾಯಿಹಾಲು ಅಗತ್ಯ

19MDLG1
Published on

ಮೂಡಲಗಿ: ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ತಾಯಿಹಾಲು ಮುಖ್ಯವಾಗಿರುವುದರಿಂದ ತಿಳಿದುಕೊಳ್ಳುವುದು ಮುಖ್ಯ ಎಂದು ಸಮುದಾಯ ಆರೋಗ್ಯ ಕೇಂದ್ರದ ವೆದ್ಯಾಧಿಕಾರಿ ಭಾರತಿ ಕೋಣಿ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಟಪ್ರಭಾದ ಕೆಎಚ್​ಐ ಕಾಲೇಜು ಹಾಗೂ ಸ್ಕೂಲ್​ ಆ್​ ನರ್ಸಿಂಗ್​ ಮತ್ತು ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಯಿಹಾಲಿನ ಮಹತ್ವ ಜಾಗತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಯಿಹಾಲಿನ ಮಹತ್ವದ ಬಗ್ಗೆ ಬೀದಿ ನಾಟಕಗಳು ಅರಿವು ಮೂಡಿಸುತ್ತವೆ ಹಾಗೂ ತಾಯಿಹಾಲಿನ ಪ್ರಯೋಜನಗಳ ಮಾಹಿತಿ ತಿಳಿಸಲಾಗುತ್ತದೆ. ಮಗುವಿನ ಬೆಳವಣಿಗೆಗೆ ತಾಯಿಹಾಲು ತುಂಬ ಮುಖ್ಯ ಎಂದರು.

ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ತೇಜಸ್ವಿ ಹೊಳೆಪ್ಪನ್ನವರ ಮಾತನಾಡಿ, ತಾಯಿಹಾಲು ಅಮತಕ್ಕೆ ಸಮಾನ. ಹುಟ್ಟಿದ ಗಂಟೆಯೊಳಗೆ ಮಗುವಿಗೆ ಹಾಲುಣಿಸಲು ಪ್ರಾರಂಭಿಸಬೇಕು. ಆರು ತಿಂಗಳವರೆಗೆ ಕೇವಲ ತಾಯಿಹಾಲು ಮಾತ್ರ ನೀಡಬೇಕು. ನಂತರ ದ್ರವರೂಪದ ಪೋಷಕಾಂಶಯುಕ್ತ ಪೂರಕ ಆಹಾರ ನೀಡಬೇಕು. ಇದರಿಂದ ಶಿಶುವಿನ ಸದಢ ಬೆಳವಣಿಗೆಗೆ ಅಗತ್ಯವಾದ ಖನಿಜಾಂಶ, ಪೋಷಕಾಂಶ, ವಿಟಮಿನ್​ ದೊರೆಯುತ್ತದೆ ಎಂದು ಹೇಳಿದರು. ವಿದ್ಯಾರ್ಥಿನಿಯರು ತಾಯಿಹಾಲಿನ ಮಹತ್ವದ ಬಗ್ಗೆ ಬೀದಿ ನಾಟಕ ಮಾಡಿ ಬಾಣಂತಿಯರಲ್ಲಿ ಜಾಗತಿ ಮೂಡಿಸಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶೋಭಾ ಸುಲ್ತಾನಪುರ, ಲಕ್ಷಿ$್ಮ ಸುಂಕದ, ದಾನಮ್ಮ ಸಡಲಿ, ಅರ್ಚನಾ ಪಾಟೀಲ, ನಯನಾ ಕುಲಕರ್ಣಿ, ಆಶಾ ಚೌವಾನ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net