ತಾಯಿ ಹಾಲು ಅಮೃತಕ್ಕೆ ಸಮಾನ

5hbd3
Published on

ಹುಮನಾಬಾದ್: ತಾಯಿ ಹಾಲು ಅಮೃತಕ್ಕೆ ಸಮ ಎಂದು ಸ್ಥಳೀಯ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಆಸ್ಪತ್ರೆ, ರೋಟರಿ ಕ್ಲಬ್, ನ್ಯೂ ಸೆಂಚೂರಿ ಕ್ಲಬ್ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ಮಾತನಾಡಿ, ತಾಯಿ ಹಾಲು ಕುಡಿದ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂದರು.
ಹಾಲು ಪರಿಶುದ್ಧ ಮತ್ತು ರೋಗಾಣು ರಹಿತವಾಗಿದೆ. ಮಗುವಿಗೆ ರೋಗ ಬರದಂತೆ, ಸೊಂಕು, ಅತಿಸಾರ, ಭೇದಿ ಆಗದಂತೆ ತಡೆಯುತ್ತದೆ. ಎದೆಹಾಲು ತಾಯಿ ಮತ್ತು ಮಗುವಿನ ಮಧ್ಯೆ ಪ್ರೀತಿ, ಮಮತೆ, ವಾತ್ಸಲ್ಯ ಕರುಣೆ ಬೆಸೆಯುತ್ತದೆ ಎಂದರು.
ಬ್ರಿಮ್ಸ್ ಆಸ್ಪತ್ರೆ ಮಕ್ಕಳ ತಜ್ಞ ಡಾ.ಶರಣ ಬುಳ್ಳಾ ಮಾತನಾಡಿ, ಮಗು ಜನನ ಹೊಂದಿದ ತಕ್ಷಣ ತಾಯಿ ಕಡ್ಡಾಯವಾಗಿ ಹಾಲುಣಿಸಬೇಕು. ಹಾಲು ಉಣಿಸುವುದರಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ದೊರೆತು, ಸದೃಢವಾಗಿ ಬೆಳವಣಿಗೆ ಆಗುತ್ತದೆ ಎಂದರು.
ರೋಟರಿ ಕ್ಲಬ್ ನ್ಯೂ ಸೆಂಚೂರಿ ಅಧ್ಯಕ್ಷ ಡಾ.ಕಪಿಲ್ ಪಾಟೀಲ್, ಕಾರ್ಯದರ್ಶಿ ಶಿವಕುಮಾರ ಫಾಕಲ್, ಸ್ತಿ ರೋಗ ತಜ್ಞ ಡಾ.ವಿಜಯಲಕ್ಷಿ ಸ್ತನ್ಯಪಾನದ ಕುರಿತು ಮಾತನಾಡಿದರು. ಪ್ರಮುಖರಾದ ನಾಗರಾಜ ಕರ್ಪೂರ, ನಿತಿನ ಕರ್ಪೂರ, ಶಿವಕುಮಾರ ಕಿವಡೆ, ಪ್ರಿಯದರ್ಶಿನಿ, ಶೈಲಜಾ ಇತರರಿದ್ದರು. ಗೀತಾ ರೆಡ್ಡಿ ಸ್ವಾಗತಿಸಿದರು. ಸುವರ್ಣಕುಮಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net