ತಾಯಿ ಹಾಲಿನಲ್ಲಿದೆ ರೋಗ ನಿರೋಧಕ ಶಕ್ತಿ

4-8 blk
Published on

ಭಾಲ್ಕಿ: ತಾಯಿ ಹಾಲಿನಲ್ಲಿ ಸರ್ವ ರೋಗ ನಿರೋಧಕ ಶಕ್ತಿಯಿದೆ. ಆದ್ದರಿಂದ ತಾಯಂದಿರು ಹೆತ್ತ ಮಕ್ಕಳಿಗೆ ಸಾಕಾಗುವಷ್ಟು ನಿತ್ಯ ಹಾಲು ಕುಡಿಸಬೇಕು ಎಂದು ಮಕ್ಕಳ ತಜ್ಞೆ ಡಾ.ವಸಂತ ಪವಾರ ಸಲಹೆ ನೀಡಿದರು.
ಪಟ್ಟಣದ ಲೆಕ್ಚರ್ ಕಾಲನಿಯ ತಳವಾಡೆ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ನಿಂದ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ಮಾತನಾಡಿ, ಮಕ್ಕಳಿಗೆ ಹೆಚ್ಚು ಹಾಲು ಕುಡಿಸಿದಂತೆ ತಾಯಂದಿರಲ್ಲಿ ಹಾಲಿನ ಉತ್ಪನ್ನ ಹೆಚ್ಚುತ್ತದೆ. ಎರಡು ಸ್ತನ್ಯಗಳಿಂದ ಮಕ್ಕಳಿಗೆ ಹಾಲು ಕುಡಿಸಬೇಕು. ಭವಿಷ್ಯದಲ್ಲಿ ಮಕ್ಕಳನ್ನು ಮಾರಕ ರೋಗಗಳಿಂದ ಇದು ತಡೆಗಟ್ಟುತ್ತದೆ ಎಂದರು.
ಸ್ತಿçÃರೋಗ ತಜ್ಞೆ ಡಾ.ಶೈಲಜಾ ತಳವಾಡೆ ಮಾತನಾಡಿ, ಮಕ್ಕಳಿಗೆ ಹಾಲು ಕುಡಿಸುವ ಜವಾಬ್ದಾರಿ ತಾಯಿಗಷ್ಟೇ ಅಲ್ಲದೆ ಕುಟುಂಬದ ಸರ್ವ ಸದಸ್ಯರ ಮತ್ತು ವೈದ್ಯರ ಮೇಲಿದೆ. ತಾಯಿ ೭-೮ ತಿಂಗಳ ಗರ್ಭಾವಸ್ಥೆಯಲ್ಲಿದ್ದಾಗ ಆಸ್ಪತ್ರೆ ಸಿಬ್ಬಂದಿ ತಾಯಿ ಎದೆ ಹಾಲು ಪರೀಕ್ಷಿಸಿ ಸಲಹೆ ನೀಡಬೇಕು. ಕೆಲ ಮಹಿಳೆಯರು ಸೌಂದರ್ಯ ಕೆಡುತ್ತದೆ ಎಂದು ಹಾಲು ಕುಡಿಸಲು ಹಿಂದೇಟು ಹಾಕುತ್ತಿರುವುದು ವಿಷಾಧದ ಸಂಗತಿ. ತಾಯಿ ಹಾಲಿನ ಪೌಷ್ಠಿಕಾಂಶ ಅಮೃತಕ್ಕೆ ಸಮಾನ ಎಂದರು.
ಡಾ.ನಿತೀನ ಪಾಟೀಲ್, ಡಾ.ಸಜ್ಜಲ ಬಳತೆ, ಡಾ.ಶಿಲ್ಪಾ, ಸುನೀಲಕುಮಾರ ತಳವಾಡೆ ಇತರರಿದ್ದರು. ರೋಟರಿ ಕಾರ್ಯದರ್ಶಿ ಸಾಗರ ನಾಯಕ್ ಸ್ವಾಗತಿಸಿದರು. ಪ್ರಾಚಾರ್ಯ ಅಶೋಕ ರಾಜೋಳೆ ನಿರೂಪಣೆ ಮಾಡಿದರು. ರೋಟರಿ ಕೋಶಾಧ್ಯಕ್ಷ ಡಾ.ಶಶಿಕಾಂತ ಭೂರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net