

ವಿಜಯಪುರ: ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಮಹಿಳೆಯರನ್ನು ಒಳಗೊಂಡಂತೆ ಸ್ತನ ಕ್ಯಾನ್ಸರ್ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು, ಸ್ತನ ಕ್ಯಾನ್ಸರ್ನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆದರೆ ನೂರಕ್ಕೆ ನೂರರಷ್ಟು ಗುಣಪಡಿಸುವ ಸಾಧ್ಯತೆಗಳಿವೆ ಎಂದು ಮಹಾರಾಷ್ಟ್ರದ ಸಾಂಗಲಿಯ ಪ್ರಗತಿ ಆಸ್ಪತ್ರೆಯ ಕ್ಯಾನ್ಸರ್ ಶಸಚಿಕಿತ್ಸಕ ಡಾ. ವಿವೇಕ್ಎಂ. ಕುಲಕರ್ಣಿ ಹೇಳಿದರು.
ನಗರ ಹೊರ ವಲಯದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ೇಮಪಾಲನ ನಿರ್ದೇಶನಾಲಯ, ಎನ್ಎಸ್ಎಸ್ ಕೋಶ, ಮಹಿಳಾ ಅಧ್ಯಯನ ಕೇಂದ್ರ ಹಾಗೂ ಸ್ಥಳಿಯ ವಿಜಯ ಡಯಾಗ್ನೋಸ್ಟಿಕ್ ಇಮೇಜಿಂಗ್ ಅವರ ಸಹಯೋಗದಲ್ಲಿ ಗುರುವಾರ ನಡೆದ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ತನ ಕ್ಯಾನ್ಸರ್ ನಾಲ್ಕು ಹಂತಗಳಲ್ಲಿ ಕಂಡು ಬರುತ್ತದೆ. ನಾಲ್ಕನೇ ಹಂತದಲ್ಲಿ ಸ್ತನ ಕ್ಯಾನ್ಸರ್ನ್ನು ಗುಣಪಡಿಸಲು ಸಾಧ್ಯವಿಲ್ಲ. ಬದಲಿಗೆ ವಿವಿಧ ಚಿಕಿತ್ಸೆಯ ಮೂಲಕ ರೋಗಿಯ ಜೀವಿತಾವಧಿಯನ್ನು ಸ್ವಲ್ಪ ಮಟ್ಟದಲ್ಲಿ ಹೆಚ್ಚಿಸಬಹುದಾಗಿದೆ. ಹಾಗಾಗಿ 25 ವರ್ಷ ಮೇಲ್ಪಟ್ಟ ಮಹಿಳೆಯರು ಕನಿಷ್ಠ ವರ್ಷಕ್ಕೆ ಒಂದು ಬಾರಿಯಾದರೂ ಸ್ತನ ಕ್ಯಾನ್ಸರ್ ಕುರಿತು ಪರೀೆ ಮಾಡಿಸುವುದು ಉತ್ತಮ ಎಂದು ಅವರು ತಿಳಿಸಿದರು.
ಕನ್ಸಲ್ಟಿಂಗ್ ರೆಡಿಯೋಲಜಿಸ್ಟ್ ಡಾ. ಸ್ವಾತಿ ದೇಸಾಯಿ ಮಾತನಾಡಿ, ಮಹಿಳೆಯರು ಸ್ತನ ಕ್ಯಾನ್ಸರ್ಅನ್ನು ಸ್ವಯಂ ಪರೀೆ ಮಾಡಿಕೊಳ್ಳುವುದರ ಮೂಲಕವು ಅದನ್ನು ಗುರುತಿಸಬಹುದು. ಸ್ತನಗಳ ಗಾತ್ರದಲ್ಲಿ ಬದಲಾವಣೆ, ಪೇನ್ ಲೆಸ್ ಲಂಪ್, ಸ್ತನಗಳು ಕೆಂಪಾಗುವುದು, ಚರ್ಮ ದಪ್ಪಗಾಗುವುದು ಸೇರಿ ಈ ರೀತಿಯ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರ ಕಾಣುವಂತೆ ಸಲಹೆ ನೀಡಿದರು.
ವಿದ್ಯಾರ್ಥಿ ೇಮಪಾಲನ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಡಾ. ಅಶ್ವಿನಿ.ಕೆ.ಎನ್., ಎನ್ಎಸ್ಎಸ್ ಟಕದ ಸಂಯೋಜಕಿ ಡಾ. ತಹಮೀನಾ ಕೋಲಾರ, ವಿವಿಧ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿನಿಯರು, ಸಂಶೋಧನಾ ವಿದ್ಯಾರ್ಥಿನಿಯರು ಮತ್ತಿತ್ತರರಿದ್ದರು.