ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಪಾಹಾರ ವ್ಯವಸ್ಥೆ

05 06 2025_BGR RURAL_PAGE_03
ವಿಜಯಪುರದ ಸರ್ಕಾರಿ ಹೆಣ್ಣು ಮಕ್ಕಳ ಮಾದರಿ ಶಾಲೆಯಲ್ಲಿ ಬೆಳಗಿನ ಉಪಹಾರಕ್ಕೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕ ಮನೋಹರ್​, ಶಿಕ್ಷಕಿಯರಾದ ಮಾಧವಿ, ದಾಾಯಿಣಿ, ಸರಸ್ವತಿ, ನಿರ್ಮಲಾ, ರೋಹಿಣಿ, ಸೀಮಾ, ಮಮತಾ, ರಾಜ್ವೇಶ್ವರಿ, ಅನ್ನಪೂರ್ಣೇಶ್ವರಿ, ಶೋಭಾ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯೆ ರಾಧಾ, ಸದಸ್ಯೆ ಮಾಲಾ ಹಾಗೂ ಮಕ್ಕಳು ಇದ್ದರು.
Published on

ವಿಜಯಪುರ : ಇಲ್ಲಿನ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆಯಲ್ಲಿ 500ಕ್ಕೂ ಹೆಚ್ಚು ಮಕ್ಕಳಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ನೀಡಲಾಗುತ್ತಿರುವ ಪ್ರತಿದಿನ ಬೆಳಗಿನ ಉಪಹಾರಕ್ಕೆ ಮುಖ್ಯ ಶಿಕ್ಷಕ ಮನೋಹರ್​ ಚಾಲನೆ ನೀಡಿದರು.

ಶಾಲೆಗೆ ಪಟ್ಟಣ ಮಾತ್ರವಲ್ಲದೆ ಸುತ್ತಮುತ್ತಲ ಹಳ್ಳಿಗಳಿಂದ ಹೆಚ್ಚು ವಿದ್ಯಾರ್ಥಿನಿಯರು ಬರುತ್ತಿದ್ದು, ಬೆಳಗ್ಗೆ ತಿಂಡಿ ಮಾಡದೇ ಬಹಳಷ್ಟು ಮಕ್ಕಳು ಬರುತ್ತಾರೆ. ಅವರಿಗೆ ಪೌಷ್ಟಿಕಾಂಶದ ಕೊರತೆ ಉಂಟಾಗುತ್ತದೆ. ಇದನ್ನು ಗಮನಿಸಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಶಾಲೆಯನ್ನು ದತ್ತು ತೆಗೆದುಕೊಂಡಿದ್ದು, ಮಕ್ಕಳಿಗೆ ಉಪಹಾರ ನೀಡಲು ಒಪ್ಪಿದೆ ಎಂದರು.

ಶಾಲೆಯಲ್ಲಿ ಎಲ್​ಕೆಜಿ, ಯುಕೆಜಿ ಜತೆಗೆ ಇಂಗ್ಲಿಷ್​ ಶಿಕ್ಷಣ ಪ್ರಾರಂಭವಾಗಿದ್ದು, 30ಕ್ಕೂ ಹೆಚ್ಚು ಶಿಕ್ಷಕರು ಇದ್ದಾರೆ. ಮಕ್ಕಳಿಗೆ ಸಮವಸ್ತ್ರ, ಶೂ, ಪಠ್ಯಪುಸ್ತಕ ಸೇರಿ ಅಗತ್ಯ ವಸ್ತುಗಳನ್ನು ಉಚಿತವಾಗಿ ಪೂರೈಸಲಾಗುತ್ತಿದೆ. ಪಾಲಕರು ಮಕ್ಕಳ ಕಲಿಕೆ ಮತ್ತು ಶಿಸ್ತಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net