ಅನ್ನದಾತರ ಜಮೀನು ಕಬಳಿಸುವ ಹುನ್ನಾರ

4Athni2
Published on

ಅಥಣಿ: ರೈತರ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗಿರುವುದನ್ನು ರಾಜ್ಯ ಸರ್ಕಾರ ಕೂಡಲೇ ತೆಗೆದುಹಾಕಬೇಕು ಎಂದು ಒತ್ತಾಯಿಸಿ ಬಿಜೆಪಿ ಮತ್ತು ರೈತ ಮೋರ್ಚಾ ಮಂಡಲದಿಂದ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಶ್ರೀಶೈಲ್ ಗುಡಮೆ ಮೂಲಕ ಸೋಮವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ರಾಜ್ಯದ ರೈತರ ಜಮೀನನ್ನು ಕಾಂಗ್ರೆಸ್ ಸರ್ಕಾರ ವಕ್ಫ್ ಮೂಲಕ ಕಬಳಿಸುವ ಹುನ್ನಾರ ನಡೆಸಿದೆ. ಮುಸ್ಲಿಮರನ್ನು ಓಲೈಸಲು ಬೋರ್ಡ್ ಪರವಾಗಿ ನಿಂತಿದೆ. ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ನೋಟಿಸ್ ತಡೆಹಿಡಿದಿರುವುದು ಕೇವಲ ಚುನಾವಣೆ ತಂತ್ರಗಾರಿಕೆ. ಸರ್ಕಾರ ವಕ್ಫ್ ಬೋರ್ಡ್ ಮಂಡಳಿಯ ಹೆಸರು ಪಹಣಿಯಲ್ಲಿ ನಮೂದಾಗಿರುವುದನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿದರು.

ಉಮೇಶರಾವ್ ಬಂಟೋಡ್ಕರ, ಪ್ರಭಾಕರ ಚವ್ಹಾಣ, ಶಿವಾನಂದ ಇಂಗಳೆ, ಸಂಪತ್‌ಕುಮಾರ ಶೆಟ್ಟಿ ಮಾತನಾಡಿದರು.

ತಾಲೂಕಿನ ವಿವಿಧ ಗ್ರಾಮಗಳ ನೂರಾರು ರೈತರು ಪಹಣಿಪತ್ರ ಹಿಡಿದು ಪ್ರತಿಭಟಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಮುಖಂಡರಾದ ಗಿರೀಶ ಬುಟಾಳೆ, ಮಲ್ಲು ಹಂಚಿನಾಳ, ಸಿದ್ದು ಪಾಟೀಲ, ಪುಟ್ಟು ಹಿರೇಮಠ, ಶಕುಂತಲಾ ಗಾರ್ಗೆ, ನಿಂಬವ್ವ ಯಲ್ಲಡಗಿ, ಸರಸ್ವತಿ ನೇಮಗೌಡ, ಸುನೀಲ ಮೇತ್ರಿ, ರಾಹುಲ ಹೊಮಕರ, ರಾಜು ವಾಘಮೊರೆ, ಅಣ್ಣಪ್ಪ ಹಳ್ಳೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net