ಆನೇಕಲ್​ನಲ್ಲಿ ಶೌರ್ಯ ಜಾಗೃತಿ ಜಾಥಾ

27 05 2025_BNG_RURAL_PAGE_2
ಆನೇಕಲ್​ನ ಅಮರ ಜವಾನ್​ ಶಕ್ತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಶೌರ್ಯ ಜಾಗೃತಿ ಜಾಥಾದಲ್ಲಿ ಧರ್ಮಸ್ಥಳ ೇಮಾಭಿವೃದ್ಧಿ ಸಂದ ಸದಸ್ಯರು, ದಿವ್ಯ ಸಂಕೀರ್ತನ ತಂಡದ ಯತೀಶ್ವರಿ ರಾಮಪ್ರಿಯಾಂಬ, ನಳಿನಾ, ಜಯದೇವ್​ ಸೇರಿ ನೂರಾರು ಜನಜಾಥಾದಲ್ಲಿ ಹೆಜ್ಜೆಹಾಕಿದರು. ಯತಿರಾಜ ಅಯ್ಯಂಗಾರ್​ ಗುರೂಜಿ , ಶಿಕ್ಷಣ ತ ಜಿಎಂಆರ್​ ಮುನಿರಾಜು ಇದ್ದರು.
Published on

ಆನೇಕಲ್​ : ಪಟ್ಟಣದ ಅಮರ ಜವಾನ್​ ಶಕ್ತಿ ಕೇಂದ್ರದಿಂದ ಭಾನುವಾರ ಸಂಜೆ ಶೌರ್ಯ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ರಾಮಾನುಜಾಚಾರ್ಯ ಮಠದಿಂದ ಹೊರಟ ಜಾಥಾ ಬಾಲಗಂಗಾಧರ ತಿಲಕ್​ ಚೌಕ ಹಾಗೂ ತ್ಯಾಗರಾಜ ರಸ್ತೆ ಮೂಲಕ ದೇವಾಂಗ ಪೇಟೆ, ಸಂಗೊಳ್ಳಿ ರಾಯಣ್ಣ ರಸ್ತೆ, ದೇವರಕೊಂಡಪ್ಪ ವೃತ್ತದಲ್ಲಿ ಮಾರ್ಗವಾಗಿ ಸಾಗಿ ಅಮರ ಜವಾನ್​ ಶಕ್ತಿ ಕೇಂದ್ರದಲ್ಲಿ ಸಮಾರೋಪಗೊಂಡಿತು.

ಮುಖ್ಯರಸ್ತೆಗಳ ಇಕ್ಕೆಲಗಳಲ್ಲಿ ನಿಂತಿದ್ದ ಜನ ಭಾರತ್​ ಮಾತಾ ಕೀ ಜೈ ಎಂದು ಜಯಕಾರ ಕೂಗಿ ದೇಶ ಭಕ್ತಿ ಮೆರೆದರು. ಯತಿರಾಜ ಅಯ್ಯಂಗಾರ್​ ಗುರೂಜಿ ಮಾತನಾಡಿ, ಪಹಗ್ಲಾಮ್​ನಲ್ಲಿ ಕೃತ್ತಕ್ಕೆ ಪ್ರಚೋದನೆ ನೀಡಿದವರ ನಾಮಾವಶೇಷವಾಗಿದೆ. ಹಿಂದು ಎದ್ದರೆ ದೇಶ ಎದ್ದೀತು. ಭಾರತ ಮಾತೆ ಮುನಿದರೆ ಶತ್ರು ಸರ್ವ ನಾಶ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದ ಪ್ರಧಾನಿ ಮೋದಿ ದೇಶ ಕಂಡ ಅಪ್ರತಿಮ ವೀರ ಎಂದರು.

ಕ್ಷಣ ತ ಜಿಎಂಆರ್​ ಮುನಿರಾಜು ಮಾತನಾಡಿ, ನೆರೆ ದೇಶ ಆಗಾಗ ಭಾರತವನ್ನು ಕೆಣಕಿ ಅವಮಾನಪಡುತ್ತದೆ. ಆಗಂತುಕರು, ಭಯೋತ್ಪಾದಕರನ್ನು ಸೃಷ್ಟಿಸುವ ದೇಶ ಪಾಕಿಸ್ತಾನ ಮುಂದೊಂದು ದಿನ ಭೂಪಟದಿಂದ ಮರೆಯಾಗುತ್ತದೆ. ಪ್ರಧಾನಿ ಮೋದಿ ಅವರ ತಾಳ್ಮೆ, ಜಾಣ ನಡೆ ವರ್ಣಿಸಲಸಾಧ್ಯ. ಏನಾದರೂ ಮಾಡಿ ಪಿಒಕೆ ಪದ ಇರಬಾರದು. ಆದಿ ಗುರು ಶಂಕರಾಚಾರ್ಯರ ಕಾಶ್ಮೀರಪುರ ಕಲ್ಪನೆ ಸಾಕಾರಗೊಳ್ಳಲೇಬೇಕು ಎಂದು ಒತ್ತಾಯಿಸಿದರು.

ಧರ್ಮಸ್ಥಳ ೇಮಾಭಿವೃದ್ಧಿ ಸಂದ ಸದಸ್ಯರು, ದಿವ್ಯ ಸಂಕೀರ್ತನ ತಂಡದ ಯತೀಶ್ವರಿ ರಾಮಪ್ರಿಯಾಂಬ, ನಳಿನಾ, ಜಯದೇವ್​ ಸೇರಿದಂತೆ ನೂರಾರು ದೇಶ ಭಕ್ತರು ಜಾಥಾದಲ್ಲಿ ಹೆಜ್ಜೆಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net