ಧೈರ್ಯದಿಂದ ಪರೀಕ್ಷೆ ಎದುರಿಸಿ

18telasanga2
Published on

ತೆಲಸಂಗ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದು ಚಿಕ್ಕೋಡಿ ಉಪನಿರ್ದೇಶಕರ ಕಾರ್ಯಾಲಯದ ವಿಷಯ ಪರಿವೀಕ್ಷಕ ಸಂಗಮೇಶ ಹೂಗಾರ ಹೇಳಿದರು.

ಗ್ರಾಮದ ಜ್ಞಾನಭಾರತಿ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು. ಪರೀಕ್ಷೆ ಹಬ್ಬದಂತೆ ಸಂಭ್ರಮಿಸಿದಾಗ ಯಶಸ್ಸು ತಾನಾಗಿಯೇ ನಿಮ್ಮದಾಗುತ್ತದೆ. ಧೈರ್ಯದಿಂದ ಪರೀಕ್ಷೆ ಎದುರಿಸಿ ಎಂದರು.

ಶಿಕ್ಷಕರಾದ ವಿಠ್ಠಲ ಶೆಲ್ಲೆಪ್ಪಗೋಳ ಮತ್ತು ಸುರೇಶ ಕುಂಬಾರ ಮಾತನಾಡಿದರು. ಶಿಕ್ಷಕರ ಜಿಲ್ಲಾ ನೌಕರರ ಸಂಘಕ್ಕೆ ಆಯ್ಕೆಯಾದ ಸುರೇಶ ಕುಂಬಾರ ಮತ್ತು ಶಿಕ್ಷಕರ ಸಹಕಾರಿ ಸಂಘಕ್ಕೆ ಆಯ್ಕೆಯಾದ ವಿಠ್ಠಲ ಶೆಲ್ಲೆಪ್ಪಗೋಳ ಅವರನ್ನು ಸನ್ಮಾನಿಸಲಾಯಿತು.

ಡಾ.ಬಿ.ಎಸ್. ಕಾಮನ್, ಬಿ.ಜಿ. ಎಂಬತ್ನಾಳ, ಧರೆಪ್ಪ ನಾಗಗೋಳ ಮಾತನಾಡಿದರು. ಲತಾ ಶೆಲ್ಲೆಪ್ಪಗೋಳ, ಬಸಪ್ಪ ಕುಂಟೋಜಿ, ಮುಖ್ಯಶಿಕ್ಷಕ ಗಪೂರ ಮುಲ್ಲಾ ಸೇರಿ ಶಿಕ್ಷಕ-ಶಿಕ್ಷಕಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net